ಹೆಚ್.ಡಿ.ಕೋಟೆ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ ತಾಲೂಕು ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ. ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ , ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾನಸಿಕ ಕಾಯಿಲೆ ಇರುವ ಹಾಗೂ ವಿಕಲಚೇತನರಿಗೆ ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನೂ ಏರ್ಪಡಿಸಲಾಗಿತ್ತು.
ಈ ಕಾರ್ಯ ಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಮಾನಸಿಕ ಕಾಯಿಲೆ ಇರುವವರಿಗೆ ಹಾಗೂ ವಿಕಲಚೇತನರಿಗೆ ನಮ್ಮ ತಾಲೂಕಿನಲ್ಲಿ ಸುಮಾರು 4500 ಜನ ವಿಕಲಚೇತನರ ಇದರೆ ಹೆಬ್ಬಲ ಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಜನ ವಿಕಲಚೇತನರು ಇದ್ದರೆ ಎಲ್ಲಾ ರು ಕಾನೂನಿನಲ್ಲಿ ಸಿಗುವ ಸರ್ಕಾರಿ ಸೌಲಭ್ಯಗ ಳನ್ನು ಪಡೆದುಕೊಳ್ಳಿ ಹಾಗೂ ಪ್ರತಿಯೊಬ್ಬ ವಿಕಲಚೇತನರು UD id ಕಾರ್ಡ್ ಗಳನ್ನು ತಪ್ಪದೆ ಪಡೆದುಕೊಳ್ಳಿ ಶೇಕಡ 70ರಷ್ಟು ವಿಕಲಚೇತನ ಇರುವವರು ಸರ್ಕಾರದಿಂದ ಸಿಗುವ ಉಚಿತವಾದ ಬೈಸಿಕಲ್ ಪಡೆದುಕೊಳ್ಳಿ ಹಾಗೂ ಎಲ್ಲಾ ವಿಕಲಚೇತನರು ಆರೋಗ್ಯ ಕಾರ್ಡ್ ನ್ನು ಪಡೆದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ,ಪ್ರತಿ 2ನೇ ಶುಕ್ರವಾರ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗೆ ಮನೋರೋಗ ತಜ್ಞರು ಬರುತ್ತಾರೆ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಉಚಿತವಾದ ಔಷಧಿ ಗಳನ್ನು ಪಡೆದುಕೊಳ್ಳಿ ಹಾಗೂ ಎಲ್ಲಾರು ಮುಖ್ಯವಾಹಿನಿ ಗೆ ಬನ್ನಿ ಎಂದು ಈ ಮೂಲಕ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಗಳಾದ ಡಾ” ಟಿ. ರವಿಕುಮಾರ್ ರವರು ಜಿಲ್ಲಾ ಮಟ್ಟದ ಮನೋರೋಗ್ಯ ತಜ್ಞರು ರದ ಡಾ” ಭರತ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳು ಡಾ”ಕೀರ್ತಿ ಕುಮಾರ್ ಜೀವಿಕ ಸಂಸ್ಥೆಯ ಉಮೇಶ್ ಹಾಗೂ ವಿಕಲಚೇತನರ ತಾಲೂಕು ಸಂಯೋಜಕರಾದ ಮಹಾದೇವಯ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅವಯಮ್ಮ. ತಾಲೂಕ್ ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರು ನಾಗೇಂದ್ರ, ರವಿರಾಜ್, ಜಿಲ್ಲಾ ಮಟ್ಟದ ಸಿಬ್ಬಂದಿವರ್ಗದವರು,ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು ಪಂಚಾಯತಿ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು, ಮಾನಸಿಕ ಕಾಯಿಲೆ ಮತ್ತು ವಿಕಲಚೇತನರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿತಾಲೂಕು ಆರೋಗ್ಯ ಅಧಿಕಾರಿಗಳು ಕಾನೂನು ಅರಿವು ಮತ್ತು ಆರೋಗ್ಯ ಸೇವಾ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿತು.