ಭಾರೀ ಮಳೆಯಿಂದಾಗಿ, ಕಪಿಲೇಶ್ವರ ವಿಸರ್ಜನ ಕೆರೆಗೆ ಕಸ ಮತ್ತು ಕಲುಷಿತ ನೀರು ಸೇರಿತ್ತು, ಆದ್ದರಿಂದ ಇಂದು ಮತ್ತೊಮ್ಮೆ ಕೆರೆಯನ್ನು ಸ್ವಚ್ಛಗೊಳಿಸಲಾಯಿತು.
ಶಾಸಕ ಅನಿಲ ಬೆನಕೆ ಅಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ನಿನ್ನೆ ರಾತ್ರ್ರಿ ಹಾಗೂ ಇಂದು ಬೆಳಗ್ಗೆ ಕೆರೆಯ ಕಲುಷಿತ ನೀರು, ಕಸ ತೆಗೆದು ಪುನ: ಶುದ್ಧ ನೀರನ್ನು ಕಾಮಗಾರಿ ಕೈಗೆತ್ತಿಕೊಳ್ಳಲಾಯಿತ್ತು.
ಇದರಿಂದಾಗಿ ಇಂದು ಹಾಗೂ ನಾಳೆ ಬರುವ ಅನಂತ ಚತುರ್ದಶಿ ಎಂದು ಕಪಿಲೆಶ್ವರ ಕೆರೆ ಶೀ ಗಣೇಶನ ವಿಸರ್ಜನಕ್ಕೆ ಪುನ: ಲಭ್ಯವಾಗಿದೆ.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಾರ್ಪೊರೇಟರ ಭಾತಕಾಂಡೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಂಜುಶ್ರೀ, ಸಿದ್ದಾರ್ಥ ಭಾತಕಾಂಡೆ, ಮಹಾನಗರ ಪಾಲಿಕೆ ಸಿಬ್ಬಂದಿಗಳು ಹಾಗೂ ಮಹಾದೇವ ಎಲ್&ಟಿ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy