ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ ಗ್ರಾಮದ ಚಿಕ್ಕಬಸವಯ್ಯ ಬಿನ್ ಚನ್ನಬಸವಯ್ಯ ಎಂಬವರ ಮನೆಗೆ ದಾಳಿ ನಡೆಸಿದ ಕೊರಟಗೆರೆ ಅರಣ್ಯಧಿಕಾರಿಗಳು ಒಂದು ಕೆ.ಜಿ. 50 ಗ್ರಾಂ. ಕರಡಿಯ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಕೃತ್ಯಕ್ಕ ಬಳಸಿರುವ ಆಯುಧ ಹಾಗೂ ಕರಡಿಯ ದೇಹದ ಭಾಗಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಡಿಸೆಂಬರ್ 10ರಂದು ಬೆಳಗ್ಗೆ 9 ಗಂಟೆಯ ವೇಳೆಗೆ ಗೌಜಗಲ್ ಗ್ರಾಮದ ಚನ್ನಬಸವಯ್ಯ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕರಡಿ ಮಾಂಸ ವಶಪಡಿಸಿಕೊಂಡಿದ್ದು, ಬಳಿಕ 11ರಂದು ಇಲ್ಲಿಮ ಗೌಜಕಲ್ಲು ಎಂಬಲ್ಲಿನ ಖಾಸಗಿ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನು ಕತ್ತರಿಸಿರುವುದನ್ನು ಪತ್ತೆ ಹಚ್ಚಲಾಗಿದ್ದು, ಕರಡಿಯ ಇತರ ದೇಹದ ಭಾಗಗಳು ಅಲ್ಲಿ ದೊರೆತಿದ್ದು, ಕೃತ್ಯಕ್ಕೆ ಬಳಸಿರುವ ಮಚ್ಚು ಕೂಡ ಸ್ಥಳದಲ್ಲಿ ದೊರೆತಿತ್ತು.
ಘಟನೆಗೆ ಸಂಬಂಧಿಸಿದಂತೆ ಚನ್ನಬಸಯ್ಯ ಸೇರಿದಂತೆ 6ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700