ಕಂಠೀರವ ಕೀಡಾಂಗಣದಲ್ಲಿ ಪ್ಯಾರಾಒಲಂಪಿಕ್ ಕಮಿಟಿ ಆಫ್ ಇಂಡಿಯ ಮತ್ತು ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಸಹಯೋಗದಲ್ಲಿ, ಅಂತರಾಷ್ಟ್ರಿಯ ಪ್ಯಾರಾ ಒಲಂಪಿಕ್ ದಿನಾಚರಣೆ ಹಾಗೂ ಉತ್ತಮ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಮಾಧವ್ ವೈದ್ಯರವರು, ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಸತ್ಯನಾರಾಯಣ್, ಖಜಾಂಚಿ ಎಂ.ಮಹದೇವ್ ಮತ್ತು ಪ್ರಧಾನಕಾರ್ಯದರ್ಶಿ ಎಂ.ಆರ್.ಮಹೇಶ್ ರವರು ಚಾಲನೆ ನೀಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಪ್ಯಾರ ಒಲಿಂಪಿಕ್ ಕ್ರೀಡಾ ಪಟುಗಳ ಮ್ಯಾರಥಾನ್ ಆಯೋಜಿಸಲಾಗಿತ್ತು. ನಂತರ ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್ ಮತ್ತು ಅರ್ಜುನ್ ಪ್ರಶಸ್ತಿ ವಿಜೇತರುಗಳಾದ ಎಂ.ಮಹದೇವ್ , ಕಾಳೇಗೌಡ, ಜಿ.ವೆಂಕಟರಮಣಪ್ಪ, ಸೀತರಾಮ್,ಫಾರಮನ್ ಪಾಷ, ಕ್ರೀಡಾ ವರದಿಗಾರ ನಾಗರಾಜ್, ಸಾಮಾಜಿಕ ಸೇವಾ ಕಾರ್ಯ ಪ್ರಕಾಶಂ, ವೈದ್ಯರಾದ ಗಣಪತಿ, ಪ್ಯಾರಾ ಒಲಂಪಿಕ್ ಕ್ರೀಡಾ ಪಟು ರಾಘವೇಂದ್ರರವರಿಗೆ ಸನ್ಮಾನಿಸಲಾಯಿತು.
ಶ್ರೀಕಾಂತ್ ಮಾಧವ್ ವೈದ್ಯರವರು ಮಾತನಾಡಿ, ಅಂತರಾಷ್ಟ್ರಿಯ ಪ್ಯಾರಒಲಂಪಿಕ್ ದಿನ ಅಚರಿಸಲಾಗುತ್ತಿದೆ. ಅಂಗವೈಕಲ್ಯ ಮೀರಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಹಕಾರ ಅಗತ್ಯ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕ್ರೀಡೆ ಮತ್ತು ಕ್ರೀಡಪಟುಗಳಿಗೆ ಸಹಕಾರ, ಪ್ರೋತ್ಸಹ ನೀಡುತ್ತಿದೆ .ನಮ್ಮ ಸಂಸ್ಥೆ ಅಂಗವಿಕಲ ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಅಧ್ಯಕ್ಷರಾದ ಸತ್ಯನಾರಾಯಣ್ ರವರು ಮಾತನಾಡಿ, ಅಂಗವಿಕಲ ನಾನು ಎಂದು ಕೋರಗುವುದು ಬೇಡ, ಸಾಧನೆ ಮಾಡಲು ಮನಸ್ಸು ಇದ್ದರೆ ಸಾಕು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಕರ್ನಾಟಕದಲ್ಲಿ ಅಂಗವಿಕಲ ಕ್ರೀಡಾಪಟುಗಳಿಗೆ ರಾಜ್ಯ ಸಂಸ್ಥೆ ಹೆಚ್ಚಿನ ಸಹಕಾರ ನೀಡುತ್ತಿದೆ.
ರಾಜ್ಯದಲ್ಲಿ ಸಾಕಷ್ಟು ಅಂಗವಿಕಲ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸರ್ಕಾರ ಅವರಿಗೆ ಪ್ರೋತ್ಸಹ ನೀಡಬೇಕು ಹಾಗೂ ಸರ್ಕಾರದಲ್ಲಿ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.


