ಕೊರಟಗೆರೆ : ಸತತ 16 ವರ್ಷಗಳ ನನ್ನ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ, ನನ್ನ ಸಂಘ ಒಂದು ಕುಟುಂಬದಂತೆ ನಾನು ಮುನ್ನಡೆಸಿಕೊಂಡು ಬಂದಿದ್ದೇನೆ, ಅಷ್ಟು ವರ್ಷಗಳ ಕಾಲ ನನ್ನ ಜೊತೆಗೆ ಆತ್ಮೀಯವಾಗಿದ್ದ ಎಲ್ಲಾ ನನ್ನ ಹಿರಿಯ ಹಾಗೂ ಕಿರಿಯ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತಾ,ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಬೆಳೆವಣಿಗೆ ಅತ್ಯಂತ ಪ್ರಾಮುಖ್ಯತೆ ವಹಿಸುತ್ತವೆ, ನಮ್ಮ ಸಂಘ ಹೀಗೆ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ಮಾಜಿ ಅಧ್ಯಕ್ಷ, ಜಿಲ್ಲಾ ನಿರ್ದೇಶಕ ಕೆ.ವಿ ಪುರುಷೋತ್ತಮ್ ಆಶಿಸಿದರು.
ಕೊರಟಗೆರೆ ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಎನ್. ಮೂರ್ತಿ(ವಿ.ಕೆ.ಮೂರ್ತಿ)ಯವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಪತ್ರಿಕಾರಂಗ ಈ ಸಮಾಜದಲ್ಲಿ ತನ್ನದೇ ಆದ ಗೌರವವನ್ನು ಉಳಿಸಿಕೊಂಡು ಬಂದಿದೆ ಹಾಗೇಯೆ ಸಂಘದ ಯುವ ಸಮೂಹ ತಾಳ್ಮೆಯಿಂದ ಎಚ್ಚರವಹಿಸಿ ಕೆಲಸ ಮಾಡುವಂತಹ ಕೆಲಸವಾಗಬೇಕು, ಸದಾ ನಿಮ್ಮೊಟ್ಟಿ ಸಲಹೆ ಸೂಚನೆಗಳನ್ನು ನೀಡುತ್ತಾ ನಮ್ಮ ಸಂಘವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸೋಣ, ನೂತನವಾಗಿ ಅಧ್ಯಕ್ಷ ಸ್ಥಾನವಹಿಸುವವರ ಜೊತೆ ಎಲ್ಲಾರೂ ಹೊಂದಾಣಿಕೆಯಿಂದ ಸಾಗೋಣ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರ್ಯದರ್ಶಿಗಳಾದ ರಂಗಧಾಮಯ್ಯ ಮಾತನಾಡಿ, ಹೊಸಹೊಸ ಪತ್ರಿಭೆಗಳು ನಮ್ಮ ಪತ್ರಿಕಾರಂಗಕ್ಕೆ ಬಂದಿರುವುದು ಸಂತೋಷಕರವಾಗಿದೆ. ಸುಮಾರು ನಾವು ನಡೆದು ಬಂದ ಹಾದಿಯಲ್ಲಿಯೇ ಯುವಕ ಮಿತ್ರರು ಗುರು-ಹಿರಿಯರ ಮಾರ್ಗದರ್ಶದಲ್ಲಿ ಹೆಜ್ಜೆ ಇಡುವಂತಹ ಕೆಲಸವಾಗಿ ಗೌರವಯುತವಾಗಿ ನಡೆದುಕೊಂಡರೆ ನಮ್ಮ ಈ ಸಂಘ ಇನ್ನಷ್ಟು ಬಲಿಷ್ಠವಾಗುವುದಲ್ಲದೇ ಉತ್ತಮ ಹೆಸರು ಮಾಡಲಿದೆ ಎಂದು ಹೇಳಿದರು.
ನೂತನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎನ್.ಮೂರ್ತಿ(ವಿ ಕೆ ಮೂರ್ತಿ) ಉಪಾಧ್ಯಕ್ಷರಾಗಿ ಹೆಚ್.ಎನ್.ನಾಗರಾಜು, ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿಯಾಗಿ ನವೀನ್, ಕಾರ್ಯದರ್ಶಿಗಳಾಗಿ ಲಕ್ಷ್ಮೀಶ ಕೆ ಎಲ್,ಲಕ್ಷ್ಮೀಕಾಂತ, ನಿರ್ದೇಶಕರಾಗಿ ಮಂಜುಸ್ವಾಮಿ ಎಂ ಎನ್, ದೇವರಾಜು ಕೆ ಎನ್, ವಿಜಯಶಂಕರ್, ನಾಗೇಂದ್ರ, ನರಸಿಂಹಮೂರ್ತಿ, ಸಿದ್ದರಾಜು ಕೆ., ಲೋಕೇಶ್ ಪದಗ್ರಹಣ ಮಾಡಿದರು.
ಇದೇ ವೇಳೆ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ, ನಿರ್ಗಮಿತ ಅಧ್ಯಕ್ಷ ಹಾಗೂ ಜಿಲ್ಲಾ ನಿರ್ದೇಶಕರಾದ ಕೆ.ವಿ.ಪುರುಷೋತ್ತಮ್, ಪತ್ರಕರ್ತರಾದ ಪದ್ಮನಾಬ್, ಜಿ.ಎಂ.ಶಿವಾನಂದ್, ಹರೀಶ್ ಬಾಬು.ಬಿ.ಹೆಚ್, ಮಂಜುನಾಥ, ಕಾಮರಾಜು, ಬಾಬುನಾಯ್ಕ, ಸತೀಶ್, ರಾಜು, ಅರುಣ್ ಸೇರಿದಂತೆ ಹಲವು ಸಂಘದ ಸದಸ್ಯರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


