ಮಧುಗಿರಿ: ಭಾರತೀಯ ಜನತಾ ಪಾರ್ಟಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಬಿ.ಕೆ.ಮಂಜುನಾಥ್ ರವರು ಮಧುಗಿರಿ ನಗರದ ಗ್ರಾಮದೇವತೆ ಶ್ರೀ ದಂಡಿನ ಮಾರಮ್ಮ ದೇವಿಗೆ ಪೂಜಿ ಸಲ್ಲಿಸಿ, ನಗರದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಮೊದಲ ಬಾರಿಗೆ ರಾಜೇಶ್ ಗೌಡ ರವರ ಆಯ್ಕೆಯಿಂದಾಗಿ ಬಿಜೆಪಿ ಪಕ್ಷವು ಖಾತೆ ತೆರೆದಿದೆ. ಮೋದಿಯವರು ,ಯಡಿಯೂರಪ್ಪ ಮತ್ತು ಬೊಮ್ಮಾಯಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಅವರಿಗೆ ಶಕ್ತಿ ತುಂಬಬೇಕಿದೆ ಎಂದರು.
ಇತ್ತೀಚಿಗೆ ಸಂಸದರಾದ ಜಿ.ಎಸ್. ಬಸವರಾಜು ರವರು ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರ ಬಗ್ಗೆ ಮಾತನಾಡಿದ್ದು ಸಂಸದರಿಗೆ ಕಾಂಗ್ರೆಸ್ ಪಕ್ಷದಂತೆ ವಯಸ್ಸಾಗಿ ಅರಳು-ಮರಲಾಗಿದೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಇವರಿಬ್ಬರಲ್ಲಿ ಇರುವ ಅಸಮಾಧಾನವನ್ನು ಸರಿಪಡಿಸಲಾಗುವುದು. ಹಿಂದುಳಿದ ವರ್ಗಕ್ಕೆ ಸೇರಿದ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷವು ಗುರುತಿಸಿದ್ದು, ಜ್ವಬ್ದಾರಿಯುತ ಸ್ಥಾನವನ್ನು ನೀಡಿ ಗೌರವಿಸಿದೆ ಕಾರ್ಯಕರ್ತರು ಎದೆಗುಂದದೆ ಪಕ್ಷವನ್ನು ಸಂಘಟಿಸಿ ಎಂದು ಕರೆ ನೀಡಿದರು.
ಸಿರಾ ಶಾಸಕ ಸಿ.ಎಂ.ರಾಜೇಶ್ ಗೌಡ ಮಾತನಾಡಿ, ನರೇಂದ್ರ ಮೋದಿ ಅವರು ದೇಶದ ಜನಸಾಮಾನ್ಯರಿಗೆ ತಲುಪುವಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ದೇಶದ ವಾಸತಿರಹಿತ ನಿರ್ಗತಿಕರಿಗೆ ಮನೆಗಳನ್ನು ನಿರ್ಮಾಣ ಮಾಡಲು ಅಮೃತ ಯೋಜನೆ, ರೈತಾಪಿ ವರ್ಗದ ಮಕ್ಕಳಿಗಾಗಿ ಶಿಕ್ಷಣ ಉಜ್ವಲ ವ್ಯವಸ್ಥೆ, ರೈತರಿಗಾಗಿಿ ಪ್ರಧಾನ ಮಂತ್ರಿ ಆವಾಜ್ ಪಸಲ್ ಬೀಮ, ಈ ಮೂಲಕ ದೇಶದ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರ್ಕಾರ ಬದ್ಧವಾಗಿದೆ ನಾವು ಕಾಣಬಹುದು ಎಂದು ತಿಳಿಸಿದರು…
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾ ಹನುಮಯ್ಯ, ಎಸ್. ಸಿ ಮೋರ್ಚಾದ ಜಿಲ್ಲಾಧ್ಯಕ್ಷ ವೈ ಹೆಚ್ಚು ಹುಚ್ಚಯ್ಯ,ತಾಲೂಕು ಅಧ್ಯಕ್ಷ ಪಿ.ಎಲ್ ನರಸಿಂಹಮೂರ್ತಿ, ತಾಲೂಕು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಇಮ್ತಿಯಾಜ್ ಪಾಷ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರಪ್ಪ,ಪದಾಧಿಕಾರಿಗಳಾದ ಎಂ ಸುರೇಶ್, ಸೀತಾರಾಮ್, ಕಾರ್ತಿಕ್ ಆರಾಧ್ಯ,ಡಾಕ್ಟರ್ ವೆಂಕಟರಾಮಯ್ಯ, ರವಿಶಂಕರ್ ನಾಯಕ್ ವಿಜಯಕುಮಾರ್, ವಿಜಯಲಕ್ಷ್ಮಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy