ತುಮಕೂರು: 30 ವರ್ಷಗಳ ಕಾಲ ಕನ್ನಡ ಉಪನ್ಯಾಸಕನಾಗಿ ಕೆಲಸದ ಜೊತೆಗೆ ಬೋಧನೆ ಮಾಡಿಕೊಂಡು ಬಂದಿದ್ದು, ನಂಬರ್ 21ರಂದು ನಡೆಯುವ ಕಸಾಪದ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಪಿಯುಸಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆಎಸ್ ಸಿದ್ದಲಿಂಗಪ್ಪ ನವರು ತಿಳಿಸಿದರು.
ತಿಪಟೂರು ಜಯದೇವ ವಿದ್ಯಾರ್ಥಿನಿಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಗುಬ್ಬಿ ತಾಲೂಕು ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದೆ. ವಾರ್ಷಿಕವಾಗಿ ಸದಸ್ಯರು ಸಮ್ಮೇಳನವನ್ನು ನಡೆಸುವುದು ಕನ್ನಡ ವಿದ್ಯಾರ್ಥಿಗಳು ಉಪನ್ಯಾಸಕರು ರನ್ನು ಕೈಜೋಡಿಸಿ ಪ್ರತಿ ಗ್ರಾಮದ ನಿತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಜೊತೆಗೆ ಹೋಬಳಿ ತಾಲೂಕು ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದರು.
ರಾಮನಗರದಲ್ಲಿರುವ ಜನಪದ ಲೋಕದಂತೆ ತುಮಕೂರು ಜಿಲ್ಲೆಯಲ್ಲಿ ಕನ್ನಡ ಕಲಾ ಗ್ರಾಮವನ್ನು ಸ್ಥಾಪಿಸುವ ಮೂಲಕ ಜಿಲ್ಲೆಯ ಸಾಹಿತಿಗಳು ಬರಹಗಾರನನ್ನು ನೆನಪಿಸುವಂತೆ ನಾನು ಮಾಡುತ್ತೇನೆ ಎಂದು ಅವರು ಹೇಳಿದರು.
ಈ ವೇಳೆ ಹೊನ್ನವಳ್ಳಿ ಪ್ರಾಂಶುಪಾಲರಾದ ಶಿವಕುಮಾರ್ ದಯಾನಂದ್ ಶಿಕ್ಷಕರು ಕಂಟಲಗೆರೆ ನಾಗರಾಜು ಮತ್ತಿತರು ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700