ತುಮಕೂರು: ಕೀರ್ತನ ರಂಗ ಬಳಗ (ರಿ.), ತುಮಕೂರು, ಶ್ರೀ ಸೀತಾರಾಮ ದೇವಸ್ಥಾನ ವಿಶ್ವಸ್ಥ ಸಮಿತಿ, ಎಸ್.ಎಸ್. ಪುರಂ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಥಾ ಕೀರ್ತನ ಸಂಭ್ರಮ ೨೦೨೪ ರ ಅಂಗವಾಗಿ ಹಮ್ಮಿಕೊಂಡಿದ್ದ ಕಥಾಕೀರ್ತನ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ನೋಡುಗರ ಗಮನ ಸೆಳೆಯಿತು.
ಎಸ್.ಎಸ್.ಪುರಂನಲ್ಲಿರುವ ಶ್ರೀ ಸೀತಾರಾಮ ದೇವಾಲಯದ ಆವರಣದಲ್ಲಿ 4 ದಿನಗಳ ಕಾಲ ನಡೆದ ಕಥಾಕೀರ್ತನ ಸಂಭ್ರಮದಲ್ಲಿ ಭಾರತೀಯ ಸಾಂಸ್ಕೃತಿ ಕಲಾ ಪ್ರಕಾರಗಳಲ್ಲಿ ವಿಶಿಷ್ಟ ಕಲೆಯಾದ ಕಥಾಕೀರ್ತನೆಯನ್ನು ಹರಿಕಥಾ ವಿದ್ವಾಂಸರುಗಳಾದ ಮೈಸೂರಿನ ಮಾಲಿನಿ ಮತ್ತು ತಂಡ, ಶೀಲಾನಾಯ್ಡು, ವಸಂತಲಕ್ಷ್ಮೀ ಮತ್ತು ತಂಡ, ತುಮಕೂರಿನ ಕೀರ್ತನ ರಂಗ ಬಳಗದ ಅಧ್ಯಕ್ಷ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಕಲಾಶ್ರೀ ನರಸಿಂಹದಾಸ್ ಅವರು ನಡೆಸಿಕೊಟ್ಟರು.
ಹಿರಿಯ ಕೀರ್ತನಗಾರ್ತಿ ಕಲಾಶ್ರೀ ಬೇಲೂರು ವಸಂತಲಕ್ಷ್ಮೀ ಅವರು ಮೈಸೂರಿನಿಂದ ಆಗಮಿಸಿ ಐರಾವಣ, ಶ್ರೀರಾಮಪಟ್ಟಾಭಿಷೇಕ, ಕು. ಮಾಲಿನಿ ಗಂಗಾವತರಣ, ಶ್ರೀರಾಮಾಂಜನೇಯ ಯುದ್ಧ ಹಾಗೂ ವಸಂ ಸೀತಾರಾಮರ ಜನನದಿಂದ ಕಲ್ಯಾಣದವರೆಗೆ ವಸಂತಲಕ್ಷ್ಮೀ ಅವರು ಉತ್ತಮವಾಗಿ ಕಥಾಕೀರ್ತನೆಯನ್ನು ನಿರೂಪಿಸಿದರು.
ಸಹ ವಾದ್ಯಗಾರರಾಗಿ ಹಾ.ಮಾ. ಜಗದೀಶ್ ಬೆಂಗಳೂರು, ರಾಮಕೃಷ್ಣ ಮೂರ್ತಿ ತುಮಕೂರು, ವರದರಾಜು ಮೈಸೂರು ಮತ್ತು ತಬಲ ಸಹಕಾರದಲ್ಲಿ ಕೆ. ಕಾಂತರಾಜು ಬೆಂಗಳೂರು ಹಾಗೂ ಶ್ರೀಕಂಠ ಮೈಸೂರು ರವರು ಉತ್ತಮ ಸಹಕಾರ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx