ತುಮಕೂರು; ಕಟ್ಟೆಗೆ ಕಾಲು ಜಾರಿ ಬಿದ್ದು ಸಹೋದರಿಯರಿಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ವರಣಸಂದ್ರದಲ್ಲಿ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಕವನ (7), ಯೋಕ್ಷಿತಾ (3) ಎಂದು ಗುರುತಿಸಲಾಗಿದೆ. ತಾಯಿ ಮಂಜುಳ ಕಟ್ಟೆ ಯಲ್ಲಿ ಬಟ್ಟೆ ತೊಳೆಯುವ ವೇಳೆ ಸ್ಥಳಕ್ಕೆ ಹೋಗಿದ್ದ ಕವನ, ಯೋಕ್ಷಿತಾ ಆಟವಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಕಟ್ಟೆಯೊಳಗೆ ಬಿದ್ದಿದ್ದಾರೆ.
ಈ ವೇಳೆ ಮಕ್ಕಳನ್ನು ಕಾಪಾಡಲು ತಾಯಿ ಮಂಜುಳಾ ಕೂಡ ಕಟ್ಟೆಗೆ ಹಾರಿದ್ದಾರೆ. ಮೂವರು ಕಟ್ಟೆಗೆ ಬಿದ್ದಿರುವುದನ್ನು ಕಂಡು ಸ್ಥಳೀಯರು ಕೂಡಲೇ ಮೂವರನ್ನು ರಕ್ಷಿಸಲು ಯತ್ನಿಸಿದ್ಧಾರೆ. ಆದರೆ ತಾಯಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ದುರಾದೃಷ್ಟವಶಾತ್ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700