ಚಿತ್ರದುರ್ಗ: ಜಿಲ್ಲೆಯ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಮಡಿವಾಳ ಜನಾಂಗದವರು (ಗುರುಪೀಠದಲ್ಲಿ )ದಲ್ಲಿ ಆಯೋಜಿಸಿದ್ದ ‘ಕಾಯಕ ಜನೋತ್ಸವ-2022’ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಡಿವಾಳ ಜನಾಂಗದ ಪರಮಪೂಜ್ಯ ಗುರುಗಳಾದ , ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಮಾಚಿದೇವ ಮಹಾಸಂಸ್ಥಾನದಲ್ಲಿ ಮಾಚಿದೇವ ರತ್ನ ಪುರಸ್ಕೃತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಂತಹ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಸಚಿವರು ಡಿ.ಸುಧಾಕರ್ ರವರನ್ನು ಸಹ ಸಿದ್ದರಾಮಯ್ಯ “ನವರ ನೇತೃತ್ವದಲ್ಲಿ ಪರಮಪೂಜ್ಯ ಮಡಿವಾಳ ಗುರುಗಳಾದ ಡಾ.ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಡಿ ಆತ್ಮಿಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಮಾಜಿ ಸಂಸದರು ಆದ ಬಿ.ಎನ್ ಚಂದ್ರಪ್ಪ, ಡಿ .ಸುಧಾಕರ್ , ಟಿ.ರಘುಮೂರ್ತಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು , ಸಚಿವರು , ಕಾರ್ಯಕರ್ತರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್ . ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy