nammatumakuru

    Subscribe to Updates

    Get the latest creative news from FooBar about art, design and business.

    What's Hot

    ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ; ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದ ಡಿಕೆಶಿ!

    June 5, 2026

    ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

    June 5, 2026

    ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ನಿವಾಸಕ್ಕೆ ಸಿದ್ಧಗಂಗಾ ಶ್ರೀ ಭೇಟಿ: ವಿಶೇಷ ಆಶೀರ್ವಾದ

    June 4, 2026
    Facebook Twitter Instagram
    ಟ್ರೆಂಡಿಂಗ್
    • ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ; ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದ ಡಿಕೆಶಿ!
    • ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
    • ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ನಿವಾಸಕ್ಕೆ ಸಿದ್ಧಗಂಗಾ ಶ್ರೀ ಭೇಟಿ: ವಿಶೇಷ ಆಶೀರ್ವಾದ
    • ನನಗೂ ಸಚಿವ ಸ್ಥಾನ ಸಿಗುವ ಭರವಸೆಯಿದೆ: ಮಾಜಿ ಸಚಿವ ಸಂತೋಷ್ ಲಾಡ್
    • ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿರುವುದಕ್ಕೆ ನಾನು ಸಂಪೂರ್ಣ ತೃಪ್ತ: ಜಿ. ಪರಮೇಶ್ವರ
    • ಡಿ.ಕೆ. ಶಿವಕುಮಾರ್ ಜೀವನದ ಮಾರ್ಗದರ್ಶಕ ಶಕ್ತಿ ‘ನೊಣವಿನಕೆರೆ ಅಜ್ಜಯ್ಯ’!
    • ಕೆಪಿಸಿಸಿಗೆ ಬಿ.ಕೆ.ಹರಿಪ್ರಸಾದ್‌ ಹೊಸ ಸಾರಥಿ: ಹೈಕಮಾಂಡ್ ಮಹತ್ವದ ನಿರ್ಧಾರ
    • ಸಿಎಂ ಕುರ್ಚಿ ನನ್ನದಲ್ಲ, ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ: ಸಿಎಂ ಡಿ.ಕೆ.ಶಿವಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೆಲಸ ಕೊಡಿ ಎಂದು ಅಂಗಲಾಚುತ್ತಿರುವ ವಿನೋದ್‌ ಕಾಂಬ್ಳಿ
    ರಾಷ್ಟ್ರೀಯ ಸುದ್ದಿ August 18, 2022

    ಕೆಲಸ ಕೊಡಿ ಎಂದು ಅಂಗಲಾಚುತ್ತಿರುವ ವಿನೋದ್‌ ಕಾಂಬ್ಳಿ

    By adminAugust 18, 2022No Comments2 Mins Read
    venodkamblle

    ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಹಣಕಾಸಿನ ವಿಚಾರದಲ್ಲಿ ಸದ್ಯ ತುಂಬಾ ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ಮಾಧ್ಯಮಗಳ ವರದಿ ಪ್ರಕಾರ ಕಾಂಬ್ಳಿ, ತಮ್ಮ ದೈನಂದಿನ ಜೀನವ ನಡೆಸುವ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕ್ರಿಕೆಟಿಗರಿಗೆ ನೀಡುವ ಪಿಂಚಣಿಯನ್ನು ನೆಚ್ಚಿಕೊಂಡು ಇರುವಂತಹ ದಯನೀಯ ಸ್ಥಿತಿಗೆ ತಲುಪಿದ್ದಾರೆ.

    ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಬಹುದೊಡ್ಡ ಸ್ಟಾರ್‌ ಆಟಗಾರರಲ್ಲಿ ಒಬ್ಬರಾಗಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದ ವಿನೋದ್ ಕಾಂಬ್ಳಿ, ಈಗ ದಿನಕ್ಕೆ ಕೇವಲ 1000 ರೂಪಾಯಿ ಸಂಪಾದಿಸುವ ಸ್ಥಿತಿಯಲ್ಲಿದ್ದಾರೆ. ವಿನೋದ್ ಕಾಂಬ್ಳಿ ಭಾರತ ತಂಡದ ಪರ ಆಡುವಾಗ ಬೌಲರ್‌ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತಹ ಆಟಗಾರ. ಕಾಂಬ್ಳಿ ಉತ್ತಮ ಬೌಲರ್‌ಗಳನ್ನು ಬಡಿದು ಬೆಂಡೆತ್ತುವವ ಸಾಮರ್ಥ್ಯ ಹೊಂದಿದ್ದ ಬ್ಯಾಟರ್‌. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಕೂಡ.


    Provided by
    Provided by

    ಇಬ್ಬರೂ ಟೀಮ್ ಇಂಡಿಯಾಗೆ ಜೊತೆಯಾಗಿ ಪದಾರ್ಪಣೆ ಮಾಡಿದ್ದಾರೆ.ಆದರೆ ಇಂದು ಸಚಿನ್ ತೆಂಡೂಲ್ಕರ್ ದೇಶವಷ್ಟೇ ಅಲ್ಲ ವಿಶ್ವದ ಶ್ರೀಮಂತ ಕ್ರಿಕೆಟಿಗ ಎನ್ನುವ ಸ್ಥಿತಿಗೆ ಬೆಳೆದು ನಿಂತಿದ್ದಾರೆ. ಆದರೆ ವಿನೋದ್ ಕಾಂಬ್ಳಿ ಅವರ ಗಳಿಕೆ ಈಗ ದಿನಕ್ಕೆ ಕೇವಲ 1000 ರೂಪಾಯಿ ಆಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕಾಂಬ್ಳಿ ಅವರ ನಿವ್ವಳ ಮೌಲ್ಯವು 1 ರಿಂದ 1.5 ಮಿಲಿಯನ್ ಡಾಲರ್‌ಗಳ ನಡುವೆ ಇದೆ. ಮಾಹಿತಿಯ ಪ್ರಕಾರ, 2022 ರಲ್ಲಿ ಅವರ ವಾರ್ಷಿಕ ಆದಾಯ ಕೇವಲ 4 ಲಕ್ಷ ರೂಪಾಯಿಗಳು ಮಾತ್ರ.

    ಸದ್ಯ ಬಿಸಿಸಿಐ ನೀಡುವ ಮಾಸಿಕ ಪಿಂಚಣಿಯಿಂದ ವಿನೋದ್ ಕಾಂಬ್ಳಿ ಜೀವನ ಸಾಗಿಸುತ್ತಿದ್ದಾರೆ. ಬಿಸಿಸಿಐನಿಂದ ಸಿಗುವ ಮಾಸಿಕ 30,000 ರೂಪಾಯಿ ಪಿಂಚಣಿಯಿಂದ ಕಾಂಬ್ಳಿ ಬದುಕಬೇಕಾಗಿದೆ. ಸ್ವತಃ ಕಾಂಬ್ಳಿ ಅವರ ಈ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರಸ್ತುತ ಬಿಸಿಸಿಐನಿಂದ ಬರುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಅವರೇ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಬಾಲ್ಯ ಸ್ನೇಹಿತ ಸಚಿನ್ ತೆಂಡೂಲ್ಕರ್ ಅವರಿಗೆ ತಮ್ಮ ಸ್ಥಿತಿಯ ಬಗ್ಗೆ ತಿಳಿದಿದೆ. ಆದರೆ ಅವರಿಂದ ಏನನ್ನೂ ನಾನು ನಿರೀಕ್ಷಿಸುವುದಿಲ್ಲ ಎಂದು ಕಾಂಬ್ಳಿ ಹೇಳಿದ್ದಾರೆ. ಏಕೆಂದರೆ ಸಚಿನ್ ಈಗಾಗಲೇ ಅವರಿಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದಾರೆ.

    ಕೊರೊನಾ ಮಹಾಮಾರಿಯಿಂದ ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿನೋದ್ ಕಾಂಬ್ಳಿ ಅವರಿಗೂ ಈ ಸಾಂಕ್ರಾಮಿಕ ರೋಗದ ಪ್ರಭಾವದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಮೊದಲೆಲ್ಲಾ ವಿವಿಧ ಮೂಲಗಳಿಂದ ಉತ್ತಮ ಸಂಪಾದನೆ ಹೊಂದಿದ್ದರು. ಕಾಮೆಂಟರಿ, ಸಿನಿಮಾಗಳಲ್ಲಿ ನಟನೆ, ಟಿವಿಯಲ್ಲಿ ಕ್ರಿಕೆಟ್ ಪರಿಣತ ಹಾಗೂ ಜಾಹೀರಾತುಗಳಿಂದ ಕೋಟಿಗಟ್ಟಲೆ ಸಂಪಾದಿಸುತ್ತಿದ್ದ ಕಾಂಬ್ಳಿ, ಕೊರೊನಾ ಕಾಲದಲ್ಲಿ ತಮ್ಮ ಆದಾಯದ ಮೂಲಗಳನ್ನು ಕಳೆದುಕೊಂಡಿದ್ದಾರೆ.

    ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಬಾಲ್ಯದ ಗೆಳೆಯರು. ಇಬ್ಬರೂ 10ನೇ ತರಗತಿವರೆಗೆ ಒಟ್ಟಿಗೆ ಓದಿದ್ದಾರೆ. 50 ವರ್ಷದ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ (49) ಒಂದೇ ತರಬೇತುದಾರ ಗುರು ರಮಾಕಾಂತ್ ಅಚ್ರೇಕರ್ ಅವರಿಂದ ಕ್ರಿಕೆಟ್ ತರಬೇತಿ ಪಡೆದರು. ರಮಾಕಾಂತ್ ಅಚ್ರೇಕರ್ ಯಾವಾಗಲೂ ಸಚಿನ್‌ಗಿಂತ ವಿನೋದ್ ಕಾಂಬ್ಳಿ ಹೆಚ್ಚಿನ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ನಂಬಿದ್ದರು.

    ಅಂದಹಾಗೆ ಕಾಂಬ್ಳಿ ಸಚಿನ್‌ ಗಿಂತ ಹೆಚ್ಚು ಆಕ್ರಮಣಕಾರಿ ಬ್ಯಾಟರ್‌ ಆಗಿದ್ದರು. ಆದರೆ ಕಾಂಬ್ಳಿಗೆ ಹೆಚ್ಚು ಕಾಲ ಟೀಂ ಇಂಡಿಯಾ ಪರ ಆಡಲು ಸಾಧ್ಯವಾಗಲಿಲ್ಲ ಆದರೆ, ಸಚಿನ್ ಮಿಂಚುತ್ತಲೇ ಇದ್ದರು. ಇತ್ತ ಕಾಂಬ್ಳಿಯ ಪರಿಸ್ಥಿತಿ ಹದಗೆಡುತ್ತಲೇ ಇತ್ತು. ಆದರೆ ಸಚಿನ್ ತನ್ನ ಬಾಲ್ಯದ ಗೆಳೆಯ ಕಾಂಬ್ಳಿಯ ಕೈಬಿಡಲಿಲ್ಲ. ಸಂಕಷ್ಟದಲ್ಲಿದ್ದ ಕಾಂಬ್ಳಿಗೆ ಸಚಿನ್‌ ಹಲವು ಬಾರಿ ಸಹಾಯ ಮಾಡಿದ್ದಾರೆ.

    ಟೀಮ್ ಇಂಡಿಯಾ ಪರ ವಿನೋದ್ ಕಾಂಬ್ಳಿ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಟೆಸ್ಟ್‌ನಲ್ಲಿ 4 ಶತಕ, 2 ದ್ವಿಶತಕ ಮತ್ತು 3 ಅರ್ಧ ಶತಕಗಳ ಸಹಾಯದಿಂದ ಒಟ್ಟು 1084 ರನ್ ಗಳಿಸಿದ್ದಾರೆ. ಕಾಂಬ್ಳಿ ಟೆಸ್ಟ್‌ನಲ್ಲಿ 59.66 ಸರಾಸರಿ ಹೊಂದಿದ್ದಾರೆ. ಏಕದಿನದಲ್ಲಿ 2 ಶತಕ ಮತ್ತು 14 ಅರ್ಧ ಶತಕಗಳ ಸಹಾಯದಿಂದ 2477 ರನ್ ಗಳಿಸಿದ್ದಾರೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    Comments are closed.

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ; ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದ ಡಿಕೆಶಿ!

    June 5, 2026

    ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ದಿನಕ್ಕೆ ಸರ್ಕಾರಕ್ಕೆ ದೊಡ್ಡ ಬಂಡಾಯದ ಬಿಸಿ…

    ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

    June 5, 2026

    ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ. ಪರಮೇಶ್ವರ್ ನಿವಾಸಕ್ಕೆ ಸಿದ್ಧಗಂಗಾ ಶ್ರೀ ಭೇಟಿ: ವಿಶೇಷ ಆಶೀರ್ವಾದ

    June 4, 2026

    ನನಗೂ ಸಚಿವ ಸ್ಥಾನ ಸಿಗುವ ಭರವಸೆಯಿದೆ: ಮಾಜಿ ಸಚಿವ ಸಂತೋಷ್ ಲಾಡ್

    June 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.