ತಿಪಟೂರು: ಅಪ್ಪುವಿನ ಮೇಲಿನ ಪ್ರೀತಿಗಾಗಿ ಅಪ್ಪ ಮಗ ಇಬ್ಬರು ಕೇಶ ಮುಂಡನ ಮಾಡಿಸಿಕೊಂಡು ಬಡಾವಣೆಯ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಸಿದ ಘಟನೆ ತುಮಕೂರಿನ ತಿಪಟೂರಿನ ವಿವೇಕಾನಂದ ನಗರದಲ್ಲಿ ನಡೆದಿದೆ.
ಅಪ್ಪು ಅಭಿಮಾನಿ ರವಿ ಎಂಬವರು ಹಾಗೂ ಅವರ ಪುತ್ರ ನಟರಾಜ್ ಅವರು ಈ ಕಾರ್ಯ ಮಾಡಿದ್ದು, ಕೇಶಮುಂಡನೆ ಮಾಡಿಕೊಂಡು, ಅನ್ನಸಂತರ್ಪಣೆ ನಡೆಸಿ, ಅಪ್ಪುವಿನ ಮೇಲಿನ ವಿಶೇಷ ಪ್ರೀತಿಯನ್ನು ಹೀಗೆ ತೋರ್ಪಡಿಸಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ತಿಥಿಕಾರ್ಯ ನೆರವೇರಿಸಿ, ಕೇಶಮುಂಡನ ಮಾಡಿ, ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಅನ್ನ ಸಂತರ್ಪಣೆ ನಡೆಸಿದ್ದಾರೆ. ಇನ್ನೂ 11ನೇ ದಿನದ ತಿಥಿ ಕಾರ್ಯಕ್ಕೆ ನಾವು ಅಪ್ಪು ಸಮಾಧಿ ಬಳಿಗೆ ಹೋಗಬೇಕು ಹೀಗಾಗಿ ಇಂದೇ ಕಾರ್ಯಮಾಡಿ ಕೇಶ ಮುಂಡನ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ವಾಟ್ಸಾಪ್ ಗ್ರೂಪ್ ಸೇರಿ: