ತಮ್ಮ ಬರ್ತ್ಡೇ ದಿನ ತಮ್ಮ ಮನೆಯ ಬಳಿಗೆ ಬರಬೇಡಿ ಎಂದು ಫ್ಯಾನ್ಸ್ ಗೆ ಮನವಿ ಮಾಡಲು ಸುದ್ದಿಗೋಷ್ಠಿ ಮಾಡಿದ್ದ ನಟ ಕಿಚ್ಚ ಸುದೀಪ್ ಅವರು ಈಗ ದರ್ಶನ್ ವಿಚಾರವಾಗಿಯೂ ರಿಯಾಕ್ಟ್ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದ ಫೋಟೋ ವೈರಲ್ ಆದ ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ನಾನು ಮೊದಲಿನಿಂದ ಮಾತನಾಡಿಕೊಂಡಿದ್ದರೆ ನಾನು ನಿಜವಾಗಲೂ ದರ್ಶನ್ ಅವರನ್ನು ಹೋಗಿ ಮಾತನಾಡಿಸುತ್ತಿದ್ದೆ. ನಾವಿಬ್ಬರೂ ಸರಿಯಿಲ್ಲ. ನಾಟಕೀಯವಾಗಿ ಇರೋಕೆ ಬರಲ್ಲ. ನಮ್ಮ ಇಬ್ಬರ ಟೇಸ್ಟ್ .. ರೂಟ್ ಎಲ್ಲ ಬೇರೆ ಬೇರೆ ಎಂದು ಹೇಳಿದ್ದಾರೆ.
ಅವರಿಗೆ ಪಬ್ಲಿಕ್ ನಲ್ಲಿ ಅವಮಾನ ಆಗಿದ್ದಾಗ ನಾನು ಟ್ವೀಟ್ ಮಾಡಿದೆ. ಅದು ನನ್ನ ಕರ್ತವ್ಯ. ನನ್ನ ಜವಾಬ್ದಾರಿ ನನ್ನ ಮಗಳು. ಇನ್ನೊಬ್ಬರನ್ನು ಸರಿ ಮಾಡೋ ಶಕ್ತಿ ಇಲ್ಲ. ರೇಣುಕಾಸ್ವಾಮಿ ಕುಟುಂಬದ ನೋವು ಅವರಿಗೆ ಗೊತ್ತು ಎಂದು ಹೇಳಿದ್ದಾರೆ.
ನಾನು ಕೂಡಾ ಮಾಧ್ಯಮ ನೋಡಿಯೇ ತಿಳಿಯುತ್ತಿದ್ದೇನೆ. ನನಗೂ ಹೆಚ್ಚು ಗೊತ್ತಿಲ್ಲ. ಇದೆಲ್ಲವನ್ನು ನೋಡಿ ನಾವು ಏನು ಮಾಡಬಾರದು ಎನ್ನುವುದನ್ನು ಕಲಿಯಬೇಕು ಎಂದು ನಮ್ಮಲ್ಲಿ ಒಳ್ಳೆಯ ಕಾನೂನು ಇದೆ. ನಮಗೆಲ್ಲಾ ಕಾನೂನು ಇದೆ ಎಂದಿದ್ದಾರೆ ಕಿಚ್ಚ. ಅವರಿಗೆ ಕುಟುಂಬ, ಅಭಿಮಾನಿಗಳಿದ್ದಾರೆ. ನಾನು ಮಾತನಾಡಿ ಅವರು ಕುಟುಂಬಕ್ಕೆ ಬೇಜಾರು ಮಾಡಲ್ಲ ಎಂದು ಕಿಚ್ಚ ಅವರು ಉತ್ತರ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


