ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಉದ್ಯಮಿಯ ಹಲ್ಲೆ ನಡೆಸಿ ಕಿಟ್ರ್ಯಾಪ್ ಮಾಡಲು ಯತ್ನಿಸಿ, ಜಾಲಹಳ್ಳಿ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಬಚಾವ್ ಆಗಿದ್ದಾರೆ.
ಹೋಟೆಲ್ ಉದ್ಯಮಿ ಆಗಿರುವ ಪಂಕಜಾ ಅವರನ್ನು ಬುರ್ಖಾ ಧರಿಸಿ ಬಂದಿದ್ದವರು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿದ್ದಾರೆ.
ಕಿಡ್ನಾಪ್ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋ ಹಿಂಬಾಲಿಸಿದ ಪೊಲೀಸರು ಬಿಇಎಲ್ ಸರ್ಕಲ್ ಬಳಿ ಅಡ್ಡಹಾಕಿ ಉದ್ಯಮಿ ಪಂಕಜ ಅವರನ್ನು ರಕ್ಷಣೆ ಮಾಡಿದ್ದಾರೆ.


