ಮಂಗಳೂರು: ವ್ಯಕ್ತಿಯೊಬ್ಬರನ್ನು ಸಂಬಂಧಿಕನೇ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದ ಹೊರವಲಯದ ವಳಚ್ಚಿಲ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.
ವಾಮಂಜೂರಿನ ಸುಲೇಮಾನ್ (50) ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಹತ್ಯೆಯನ್ನು ತಡೆಯಲು ಬಂದ ಸುಲೇಮಾನ್ ಅವರ ಇಬ್ಬರು ಮಕ್ಕಳಿಗೂ ಚಾಕುವಿನಿಂದ ಇರಿಯಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಳಚ್ಚಿಲ್ ನಿವಾಸಿ ಮುಸ್ತಾಫಾ (30) ಕೊಲೆಯಾಗಿದ್ದಾನೆ. ಈತನಿಗೆ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದು, ಬಳಿಕ ಕೌಟುಂಬಿಕ ಕಲಹದಿಂದ ಈತನ ಪತ್ನಿ ತನ್ನ ತವರು ಮನೆಗೆ ಹೋಗಿದ್ದಳು.
ಇದೇ ವಿಚಾರದಲ್ಲಿ ಮಾತುಕತೆಗಾಗಿ ಸುಲೇಮಾನ್ ತಮ್ಮಿಬ್ಬರು ಮಕ್ಕಳೊಂದಿಗೆ ಬಂದಿದ್ದ ವೇಳೆ ಏಕಾಏಕಿ ಕೋಪಗೊಂಡ ಮುಸ್ತಾಫಾ ಸುಲೇಮಾನ್ ಕುತ್ತಿಗೆಗೆ ಇರಿದಿದ್ದು, ತಡೆಯಲು ಬಂದ ಸುಲೇಮಾನ್ ಅವರ ಮಗ ಶಿಹಾಬ್ ನ ಎದೆಗೆ, ರಿಯಾಬ್ ನ ಬಲ ತೋಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW