ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತೆಲುಗು ತಮಿಳು ಬಳಿಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸಕ್ಸಸ್ ಬಳಿಕ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಬಾಲಿವುಡ್ ಭಾಯ್‌ಜಾನ್ ಎಂದು ಕರೆಸಿಕೊಳ್ಳುವ ನಟ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ.
ಎ ಆರ್ ಮುರುಗದಾಸ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಕೂಡ ಸೇರಿಕೊಂಡಿದ್ದಾರೆ. ಈ ಚಿತ್ರವು ಮುಂದಿನ ಈದ್ ಹಬ್ಬಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಅನಿಮಲ್ ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ ಮಂದಣ್ಣ ಹೊಸ ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಎ.ಆರ್. ಮುರುಗದಾಸ್ ಆಕ್ಷನ್ ಚಿತ್ರ ಸಿಕಂದರ್‌ನಲ್ಲಿ ಅವರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಎದುರು ಜೋಡಿಯಾಗಲಿದ್ದಾರೆ.
ಜನಪ್ರಿಯ ಕನ್ನಡ, ತಮಿಳು ಮತ್ತು ತೆಲುಗು ನಟಿ ರಶ್ಮಿಕಾ ಮಂದಣ್ಣ 2022 ರಲ್ಲಿ ಅಮಿತಾಬ್ ಬಚ್ಚನ್ ಅವರ ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296