ತಿಪಟೂರು: ಧಾರ್ಮಿಕ ನಾಡು ಎಂದು ಹೆಸರಾಗಿರುವ ಹಾಲ್ಕುರ್ಕಿ ಕೆರೆ ಕೋಡಿ ಹೊಡೆದ ಪರಿಣಾಮ ಕಂಬಿ ಕಟ್ಟೆ, ಎರೆಪಟ್ಟೆ, ಅಮ್ಮನಹಾಳು, ಶೆಟ್ಟಿಕೆರೆ ದೊಡ್ಡಿಕಟ್ಟೆ, ಮಾಕುವಳ್ಳಿ, ಕಡೆಗೆ ಹೋಗುವ ರೈತರು ಮತ್ತು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಉಂಟಾಗಿದೆ.
ಬಹುತೇಕ ಜನರು ತೋಟದ ಮನೆಗಳಲ್ಲಿ ವಾಸಿಸುವ ಕಾರಣ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಹಾಲನ್ನು ಡೈರಿಗೆ ಹಾಕಲು ಇದೇ ಮಾರ್ಗವಾಗಿ ಕ್ರಮಿಸಬೇಕಾಗುತ್ತದೆ ಆದರೆ ಈಗಿರುವ ಪರಿಸ್ಥಿತಿಯಲ್ಲಿ ಕೇವಲ ನೂರು ಅಡಿ ದಾಟಲು ಸಾಧ್ಯವಿಲ್ಲದೆ 6 ರಿಂದ 7 ಕಿಲೋಮೀಟರ್ ಸುತ್ತುವರೆದು ಹಾಲ್ಕುರ್ಕೆಗೆ ಬರುವ ಪರಿಸ್ಥಿತಿ ಅನಿವಾರ್ಯವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರು ಮತ್ತು ಸಾರ್ವಜನಿಕರು ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಸಂಚರಿಸಲು ಸುಸಜ್ಜಿತವಾದ ಸೇತುವೆ ನಿರ್ಮಾಣ ಮಾಡಬೇಕೆಂದು ಹಾಲ್ಕುರ್ಕೆ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy