ಕೊರಟಗೆರೆ: ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಈಶ್ವರಯ್ಯ ಮತ್ತು ಉಪಾಧ್ಯಕ್ಷರಾಗಿ ಭಾಗ್ಯಮ್ಮ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಲ್ಲಾ ಸದಸ್ಯರ ಒಗ್ಗಟ್ಟಿನಿಂದ ಯಾವುದೇ ಸ್ಪರ್ಧೆ ಇಲ್ಲದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಸಂಘದ ಕಚೇರಿಯು ಹರ್ಷೋದ್ಗಾರದ ವಾತಾವರಣದಿಂದ ಕಂಗೊಳಿಸಿತು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ನೂತನ ಅಧ್ಯಕ್ಷ ಈಶ್ವರಯ್ಯ ಗೃಹ ಸಚಿವರ ಆಶೀರ್ವಾದ ಮತ್ತು ಸದಸ್ಯರ ಸಹಕಾರದಿಂದ ನನಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಸಂಘದ ಅಭಿವೃದ್ಧಿ ಮತ್ತು ರೈತರ ಹಿತಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವುದೇ ನನ್ನ ಧ್ಯೇಯ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ಮಾತನಾಡಿ, ಕ್ಷೇತ್ರದ ಶಾಸಕರು ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಆಶಯದಂತೆ ಸಂಘವು ರೈತರ ಪರವಾಗಿ ಪರಿಣಾಮಕಾರಿ ಕೆಲಸ ಮಾಡಲಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಎ.ಡಿ. ಬಲರಾಮಯ್ಯ ಮಾತನಾಡಿ, ಗೃಹ ಸಚಿವ ಪರಮೇಶ್ವರ್ ಮತ್ತು ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಆಶೀರ್ವಾದದಿಂದ ಕ್ಷೇತ್ರದ ಎಲ್ಲಾ ಸಹಕಾರ ಸಂಘಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. ಎಲ್ಲರ ಸಹಕಾರದಿಂದ ತಾಲ್ಲೂಕು ಅಭಿವೃದ್ಧಿಯ ದಾರಿಯಲ್ಲಿ ಸಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮತ್ತು ಅಶ್ವಥ್ ನಾರಾಯಣ್ ಈಶ್ವರಯ್ಯ ಮತ್ತು ಭಾಗ್ಯಮ್ಮರಿಗೆ ಉತ್ತಮ ಆಡಳಿತ ನಡೆಸುವಂತೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ನೂತನ ಸದಸ್ಯರಾದ ಕೆ.ವಿ. ಪುರುಷೋತ್ತಮ್, ರಾಘವೇಂದ್ರ, ಹೊಳವನಹಳ್ಳಿ ಜೈರಾಮ್, ವಿನಯ್ ಕುಮಾರ್, ಮಂಜುನಾಥ್ ಕೆ.ವಿ., ಹನುಮಂತರಾಯಪ್ಪ, ಶಶಿಕಲಾ, ಸಿದ್ದಲಿಂಗಪ್ಪ, ರಾಜಶೇಖರಯ್ಯ, ಗಟ್ಲಹಳ್ಳಿ ಕುಮಾರ್ ಮತ್ತು ಸರ್ಕಾರ ನಾಮ ನಿರ್ದೇಶಿನ ಸದಸ್ಯ ತ್ರಿಯಂಬಕ ಆರಾಧ್ಯ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


