ಕೊರಟಗೆರೆ: ಗಾಂಜಾ ಮಾರಾಟ ಜಾಲವನ್ನು ಭೇದಿಸಿದ ಕೊರಟಗೆರೆ ಪೊಲೀಸರು 5 ಗ್ರಾಂ ಗಾಂಜಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊರಟಗೆರೆ ಪಟ್ಟಣದ ಬೈಲಾಂಜನೇಯ ದೇವಾಲಯದ ಬಳಿ ಗಾಂಜಾ ಪಾಕೇಟ್ ವಹಿವಾಟು ನಡೆಸಲಾಗುತ್ತಿತ್ತು. 5 ಗ್ರಾಂ ಗಾಂಜಾ ಸೊಪ್ಪಿಗೆ 500ರೂ. ದರ ನಿಗದಿ ಮಾಡಿದ್ದು, ದ್ವಿಚಕ್ರವಾಹನದಲ್ಲಿ ಎಲೆಕ್ಟ್ರಾನಿಕ್ ತಕ್ಕಡಿ ಜೊತೆಗೆ ಆರೋಪಿಗಳು ಮಾರಾಟಕ್ಕೆ ಬಂದಿದ್ದರು. ಮಾದಕ ವಸ್ತುಗಳ ಪತ್ತೆ ಮತ್ತು ತಡೆಗೆ ಹದ್ದಿನ ಕಣ್ಣಿಟ್ಟಿರುವ ತುಮಕೂರು ಎಸ್ಪಿ ಅಶೋಕ ವೆಂಕಟ್ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದ ಪೊಲೀಸರ ತಂಡದಿಂದ ದಿಡಿರ್ ದಾಳಿ ನಡೆಸಿದೆ.
ಈ ವೇಳೆ ಅಂತರ್ ಜಿಲ್ಲೆಯ 4 ಜನರ ಆರೋಪಿಗಳ ಜೊತೆ 960 ಗ್ರಾಂ ಗಾಂಜಾ ಸೊಪ್ಪಿನ ಪಾಕೆಟ್ ಗಳು ಪೊಲೀಸರ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯದಿಂದ ಗುಲ್ಬರ್ಗಾ ಮಾರ್ಗವಾಗಿ ತುಮಕೂರು ಜಿಲ್ಲೆಗೆ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿತ್ತು. ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಮತ್ತು ಮಧುಗಿರಿ ಡಿವೈಎಸ್ಪಿ ರಾಮಚಂದ್ರಯ್ಯ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪಿಎಸೈ ಚೇತನ್ ಮತ್ತು ಕ್ರೈಂನ ದೊಡ್ಡಲಿಂಗಯ್ಯ—ಮೋಹನ ಅವರ ಕ್ಷಿಪ್ರ ಕಾರ್ಯಾಚರಣೆಗೆ ತುಮಕೂರು ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕ್ರೈಂ ಸಿಬ್ಬಂದಿಗಳಿಗೆ ನಗದು ಬಹುಮಾನದ ಜೊತೆ ಅಭಿನಂದನೆ ಸಲ್ಲಿಸಿದರು.
ತಮಿಳುನಾಡಿನ ಸಿಂಗಾರವೇಲು(25),ಹುಬ್ಬಳ್ಳಿಯ ಚೇತನ್(29), ಪಾವಗಡದ ವೀರನಾಗಪ್ಪ(25), ತುಮಕೂರಿನ ಪ್ರೀತಂ(27) ಬಂಧಿತ ಆರೋಪಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296