ಕೊರಟಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನೊಂದ ಬಡರೈತ ಮತ್ತು ನೊಂದ ಮಹಿಳೆಗೆ ಕೊರಟಗೆರೆಯ ಸಮಾಜ ಸೇವಕ ಎಂ ಎನ್ ಜೆ ಮಂಜುನಾಥ್ ಸಾಂತ್ವನ ಹೇಳಿ ಧೈರ್ಯತುಂಬಿ ಸಹಾಯಹಸ್ತ ನೀಡಿದರು.
ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ದೀನ್ನೆಪಾಳ್ಯದ ರೈತ ತಿಮ್ಮಯ್ಯ ಮತ್ತು ಬಿ.ಡಿ.ಪುರದ ಮಹಿಳೆ ಶಿಲ್ಪಾ ಮನೆಗೆ ಭೇಟಿ ನೀಡಿ ತಲಾ 30 ಸಾವಿರ ಆರ್ಥಿಕ ನೆರವನ್ನು ಮಂಜುನಾಥ್ ನೀಡಿದರು.
ದೀನ್ನೆಪಾಳ್ಯದ ರೈತ ತಿಮ್ಮಯ್ಯನ ಮನೆಗೆ ಭೇಟಿ ನೀಡಿದ ಅವರು ಕುಟುಂಬಕ್ಕೆ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದರು. ನಂತರ ಬಿ.ಡಿ.ಪುರ ಗ್ರಾ.ಪಂ.ಯ ಸಿ.ಬಿ. ಪಾಳ್ಯದಲ್ಲಿ ಆಕಸ್ಮಿಕ ಬೆಂಕಿಯಿಂದ ಗುಡಿಸಲು ಸುಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಆರೋಗ್ಯ ವಿಚಾರಿಸಿ 30ಸಾವಿರ ವೈಯಕ್ತಿಕವಾಗಿ ಸಹಾಯಹಸ್ತ ನೀಡಿದರು.
ಬಳಿಕ ಮಾತನಾಡಿದ ಎಂ ಎನ್ ಜೆ ಮಂಜುನಾಥ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಸೂಚನೆಯಂತೆ ನೊಂದ ಕುಟುಂಬದ ಮನೆಗೆ ಭೇಟಿನೀಡಿ ಸಹಾಯಹಸ್ತದ ಜೊತೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸರಕಾರದಿಂದ ಬರುವ ಸಹಾಯ ಧನವನ್ನು ತ್ವರಿತವಾಗಿ ನೊಂದಕುಟುಂಬಕ್ಕೆ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಸಹಾಯದ ಜೊತೆಯಲ್ಲಿ ಸ್ವಾಂತನವನ್ನು ತಿಳಿಸಿದರು.
ಭೇಟಿಯ ವೇಳೆಯಲ್ಲಿ ಹಂಚಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಭೀಮರಾಜು, ಮಾಜಿ ತಾ.ಪಂ. ಸದಸ್ಯ ರವಿಕುಮಾರ್, ಮುಖಂಡರಾದ ಅಶ್ವತಪ್ಪ, ಮಾವತ್ತೂರು ಕುಮಾರ್, ಕೇಬಲ್ ಸಿದ್ದಗಂಗಯ್ಯ, ಸುರೇಶ್ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4