ಕೆ.ಆರ್.ಪೇಟೆ: ತಾಲ್ಲೂಕು ಛಾಯಾಗ್ರಾಹಕರು ಇಂದು ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಸೇರಿ ರೈತರು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಬೆಂಬಲ ಸೂಚಿಸಿದರು.
ಟಿ.ಬಿ. ಸರ್ಕಲ್ ನಿಂದು ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ನಂತರ ಕೆ.ಆರ್.ಪೇಟೆಯ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಒಗ್ಗಟ್ಟನ್ನು ಪ್ರದರ್ಶನ ಮಾಡುವವರು ಕಾವೇರಿ ಮತ್ತು ಕರ್ನಾಟಕ್ಕಾಗಿ ಮಾತ್ರ ಹೋರಾಟ ಮಾಡಿ ಅದು ಬಿಟ್ಟು ನಿಮ್ಮ ರಾಜಕೀಯ ಪಕ್ಷಗಳ ಬಾವುಟವನ್ನು ಹಿಡಿದು ಒಗ್ಗಟ್ಟನ್ನು ಪ್ರದರ್ಶನ ಮಾಡಬ್ಯಾಡಿ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೇಳಿದ್ದರು
ಈ ಸಂದರ್ಭದಲ್ಲಿ ತಾಲ್ಲೋಕಿನ ಎಲ್ಲಾ ಛಾಯಾಗ್ರಾಹಕರು ಮತ್ತು ಕನ್ನಡ ಪರ ಸಂಘಟನೆಗಳು ಹಾಜರಿದ್ದರು.
ವರದಿ: ಮಂಜು ಶ್ರವಣೂರು


