ತುಮಕೂರು: ನಗರದ ಮಹಾತ್ಮ ಗಾಂಧಿ ಸ್ಟೇಡಿಯಂ ಎದುರಿನ ಒಳಾಂಗಣ ಕ್ರೀಡಾಂಗಣದಲ್ಲಿ ಮುಂಜಾನೆ ಗೆಳೆಯರ ಬಳಗದ ತುಮಕೂರು ನಗರದ ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಅವರ 74ನೇ ಹುಟ್ಟು ಆಚರಣೆಯನ್ನು ಆಚರಿಸಲಾಯಿತು.
ಇಂದು ಬೆಳಿಗ್ಗೆ ಪ್ರಾತಃಕಾಲದ ವಾಕಿಂಗ್ ಸಮಯದಲ್ಲಿ 74ನೇ ವಸಂತಕ್ಕೆ ಕಾಲಿಟ್ಟ ಆನಂದ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ಮುಂಜಾನೆ ಗೆಳೆಯರ ಬಳಗದ ಸದಸ್ಯ ಧನ್ಯಕುಮಾರ್ ಮಾತನಾಡಿ, ಹೋಬಳಿ ತಾಲ್ಲೂಕು ರಾಜ್ಯ ದೇಶಗಳ ಮಟ್ಟದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ 74 ಇಳಿವಯಸ್ಸಿನಲ್ಲೂ ನವಯುವಕನಂತೆ ಸಾಧನೆಗೆ ಸಿದ್ದವಿರುವ ಆನಂದ್ ಅವರ ಕಾರ್ಯ ವೈಖರಿ ಶ್ಲಾಘನೀಯ ಎಂದರು ಇಂದಿನ ಯುವಕರಿಗೆ ಸ್ಪೂರ್ತಿಯಾಗಿರುವ ಆನಂದ್ ಅವರು ಅನೇಕ ಕ್ರೀಡಾಸಕ್ತರುನ್ನು ಬೆಳೆಸಿ ಪ್ರೋತ್ಸಾಹಿಸಿದ್ದಾರೆ ಹಲವು ಕ್ರೀಡಾಸಕ್ತರಿಗೆ ಕ್ರೀಡಾ ಉಪಕರಣ ಹಾಗೂ ಶೂ, ಬಟ್ಟೆ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ತೆರಳಲು ಉಚಿತ ಪ್ರವಾಸ ಖರ್ಚು ಭರಿಸುತ್ತಿದ್ದರು. ಇಂತಹ ಅಮೋಘ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿಗೆ ಗೌರವಾರ್ಥವಾಗಿ ನಗರದ ಸ್ಟೇಡಿಯಂ ನ ಜಿಮ್ ಭಾಗಕ್ಕೆ ಆನಂದ್ ಅವರ ನಾಮಕರಣ ಮಾಡಲು ಶಾಸಕರು ಕ್ರಮ ವಹಿಸಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದರು.
ಅಂತರಾಷ್ಟ್ರೀಯ ಕ್ರೀಡಾಪಟು ಆನಂದ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನೆನಪಿನಾರ್ಥವಾಗಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಬಡ ವರ್ಗದ ಶಾರ್ಪ್ ಶೂಟರ್ ಕಿರಣ್ ನಂದನ ಎನ್ನುವ ಕ್ರೀಡಾಪಟುಗೆ ಮುಂದಿನ ಅಂತರರಾಷ್ಟ್ರೀಯ ಮಟ್ಟದ ಶಾರ್ಪ್ ಶೂಟರ್ ಪಂದ್ಯದಲ್ಲಿ ಭಾಗವಹಿಸಲು ಮುಂಜಾನೆ ಗೆಳೆಯರ ವತಿಯಿಂದ ಹತ್ತು ಸಾವಿರ ರೂ.ಗಳ ಧನ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸದಾಶಿವಯ್ಯ, ದೀನೇಶ್, ನಿವೃತ್ತ ಪ್ರಾಂಶುಪಾಲ ವೆಂಕಟೇಶ, ಸ್ವಾಮಿ, ವೆಂಕಟೇಶ, ಕೃಷ್ಣ ರಾವ್, ಹೊಸಳಯ್ಯ, ಪದನಾಭ್, ಉಮಾಮಹೇಶ್ವರ, ಉದಯ್ ಪ್ರಸಾದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ವರದಿ: ಉದಯ್ ಕುಮಾರ್, ತುಮಕೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy