ತುಮಕೂರು: ಕೇಂದ್ರದವರು 3 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದಾರೆ. ನೀರು ಹಾಕಿ ಬಸ್ ಚಲಾಯಿಸಲು ಆಗುತ್ತಾ. ಹಾಗಾಗಿ 100% ಬಸ್ ದರ ಏರಿಕೆ ಮಾಡಲೇಬೇಕು. ಎಂದು ಗುಬ್ಬಿ ಶಾಸಕ ಹಾಗೂ ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಶನಿವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನ ಮೋದಿ ಮೋದಿ ಅಂತಾ ಸಾಯ್ತಾರೆ. ತೈಲ ಬೆಲೆ ನಿಯಂತ್ರಣದ ಬಗ್ಗೆ ಈ ದೇಶ ಉದ್ಧಾರ ಮಾಡೋ ವ್ಯಕ್ತಿ ಮೋದಿ ಅವರನ್ನೇ ಕೇಳಲಿ. ಸಾರಿಗೆ ನಿಗಮಗಳ ನೌಕರರಿಗೆ 1260 ಕೋಟಿ ಅರಿಯರ್ಸ್ ನೀಡುತ್ತಿದ್ದೇವೆ. ಈಗಾಗಲೇ ಕೆಎಸ್ ಆರ್ ಟಿಸಿ ಲಾಸ್ ನಲ್ಲಿದೆ. ದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಬೆಂಗಳೂರಿನಿಂದ–ತುಮಕೂರುವರೆಗೆ ಮೆಟ್ರೋ ಮಾಡಲಿ ತುಂಬ ಒಳ್ಳೆಯದು.. ನಾನು ಅದನ್ನು ಸ್ವಾಗತಿಸುತ್ತೇನೆ. ಆದರೆ ತುಮಕೂರನ್ನು ಬೆಂಗಳೂರು ಉತ್ತರಕ್ಕೆ ಸೇರಿಸುವುದನ್ನು ಒಪ್ಪೋದಿಲ್ಲ. ಹೆಸರು ಬದಲಾವಣೆ ಮಾಡಲ್ಲ ಅಂದರೆ ಸೇರ್ಪಡೆ ಹೆಂಗೆ ಬರುತ್ತೆ. ಈ ಬಗ್ಗೆ ಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಇಡೀ ತುಮಕೂರು ಜಿಲ್ಲೆಯ ನಾಗರಿಕರು ತುಮಕೂರು ಹೆಸರು ಬದಲಾವಣೆ ಮಾಡೋಕೆ ಒಪ್ಪಲ್ಲ. ತುಮಕೂರು ಹೆಸರಲ್ಲೇ ಜಿಲ್ಲೆಯಾಗಿ ಉಳಿದುಕೊಳ್ಳಬೇಕು ಎಂದರು.
ನಾನು ಯಾರ ಮೇಲೂ ದ್ವೇಷದ ರಾಜಕಾರಣ ಮಾಡಿಲ್ಲ; ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜ್ ತಮ್ಮ ಮಗನ ವಿರುದ್ಧ ಮಾಡಿರುವ ಆರೋಪ ಕುರಿತಾಗಿ ಕೇಳಿದ ಪ್ರಶ್ನೆಗೆ ಚಿಲ್ಲರೆಗಳು ಹೇಳಿರೋದಕ್ಕೆಲ್ಲ ನಾನು ರಿಯಾಕ್ಟ್ ಮಾಡಬೇಕಾ. 40 ವರ್ಷದ ರಾಜಕಾರಣದಲ್ಲಿ ಯಾರ ಮೇಲೂ ನಾನು ದ್ವೇಷ ಮಾಡಿಲ್ಲ. ಬಿಜೆಪಿ ದಿಲೀಪ್ ನನ್ನ ವಿರುದ್ಧ ಎರಡು ಬಾರಿ ಸ್ಪರ್ಧೆ ಮಾಡಿ ಸೋತಿದ್ದಾರೆ ಬೇಕಾದರೆ ಅವರನ್ನು ಕೇಳಿ. ವೈಯಕ್ತಿಕ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ. ಒಬ್ಬ ರಾಜಕೀಯ ಪಕ್ಷದ ಮುಖಂಡನಾಗಿ ಈತರ ಚಿಲ್ಲರೆಯಾಗಿ ನಡೆದುಕೊಳ್ಳಬಾರದು. ನನ್ನ ಮಗನ ಆಡಿಯೋದಲ್ಲಿ ಪ್ರಾಪರ್ಟಿ ಬಗ್ಗೆ ಮಾತನಾಡಿದ್ದಾರೆ. ಆತನ ಪ್ರಾಪರ್ಟಿ ಬಗ್ಗೆ ಮಾತನಾಡಿದ್ದಾರಾ. ಆಡಿಯೋದಲ್ಲಿ ನನ್ನ ಮಗನನ್ನು ಪ್ರವೋಕ್ ಮಾಡುತ್ತಿರುವುದು ಗೊತ್ತಾಗುತ್ತಿದೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿಯಾಗಿ ಮಾಡಿದ್ದಾರೆ. ನಾನು ಇದರ ಬಗ್ಗೆ ನನ್ನ ಮಗನನ್ನು ಕೇಳಿದೆ. ಅವನ ಯಾರೋ ಡ್ರೈವರ್ ಬಂದಿದ್ದ. ಒಂದು ಹುಡುಗಿನ ಲವ್ ಮಾಡಿದ್ದಂತೆ. ನಾಗರಾಜ್ ಬಳಿ ಮದುವೆಯಾಗಲು 5 ಲಕ್ಷ ಕೇಳಿದನಂತೆ ಆತ ಕೊಟ್ಟಿಲ್ಲ ಅಂತ ನನ್ನ ಹತ್ರ ಹಣ ಕೇಳೋಕೆ ಬಂದಿದ್ದ ಎಂದು ಪುತ್ರ ದುಷ್ಯಂತ್ ಸ್ಪಷ್ಟವಾಗಿ ಹೇಳಿದ್ದು, ನಾಗರಾಜೇ ಅವರ ಹುಡುಗರನ್ನು ನನ್ನ ಮಗನ ಹತ್ರ ಕಳ್ಸಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದಾಗಿ ತಿರುಗೇಟು ನೀಡಿದರು. ನನ್ನ ವಿರುದ್ಧ ನಿಂತು ಕೊಳ್ಳುವವರ ಬಗ್ಗೆ ನಾನು ತಲೇನೆ ಕೆಡಿಸಿಕೊಳ್ಳಲ್ಲ. ನಾನು ನನ್ನ ಎದುರಾಳಿ ಬಗ್ಗೆ ಒಳ್ಳೇದು ಮಾತನಾಡಲ್ಲ, ಕೆಟ್ಟದ್ದು ಮಾತನಾಡಲ್ಲ. ನಾನು ಏನಾದರೂ ದ್ವೇಷ ರಾಜಕಾರಣ ಮಾಡಿದ್ದೇನೆ ಅಂತ ಯಾರಾದ್ರೂ ಹೇಳಿದರೆ ನಾನು ಒಂದು ಕ್ಷಣನೂ ರಾಜಕಾರಣದಲ್ಲಿ ಮುಂದುವರಿಯಲ್ಲ ಎಂದರು.
ಕುಮಾರಸ್ವಾಮಿ ಟೋಪಿ ಗಿರಾಕಿ ಅಂದಿದ್ದು:
ನಾನು ನೇರವಾಗಿ ರಾಜಕೀಯ ಮಾಡುವವನು. 25 ವರ್ಷದಿಂದ ಕುಮಾರಸ್ವಾಮಿ ಜೊತೆ ರಾಜಕೀಯ ಮಾಡಿದ್ದೀನಿ, .ತನಗೆ ಒಂದ್ಸಲ ಕುಮಾರಸ್ವಾಮಿ ಟೋಪಿ ಗಿರಾಕಿ ಅಂದಿದ್ದು ಎಷ್ಟು ಬೇಜಾರ್ ಆಗಲ್ಲ ಹೇಳಿ. ಇದು ವ್ಯಕ್ತಿತ್ವ ಹರಣ ಮಾಡುವ ಕೆಲಸ. ಅವರು ಮಾಡಿದ ಒಂದೇ ಒಂದು ತಪ್ಪಿನಿಂದ ನಾನು ದೂರಾದೆ. ಆದರೆ ನನ್ನ ಮಗನ ಮದುವೆಗೆ ಆಹ್ವಾನ ನೀಡಲು ಅವರ ಮನೆ ಬಳಿಗೂ ಹೋಗಿ ಲಭ್ಯವಿರದ ಕಾರಣ ವಾಪಸ್ಸಾದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


