ದ್ವಾರಕೀಶ್ ಅವರ ಮೂಲ ಹೆಸರು ಬುಂಗ್ಲೆ ಶರ್ಮಾ ರಾವ್. ಸ್ಯಾಂಡಲ್ ವುಡ್ ನ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ಸಿ.ವಿ.ಶಿವಶಂಕರ್ ಅವರು ಬುಂಗ್ಲೆ ಶರ್ಮಾ ರಾವ್ ಗೆ ದ್ವಾರಕೀಶ್ ಎಂದು ಹೆಸರಿಟ್ಟಿದ್ದರು.
ಸ್ಯಾಂಡಲ್ ವುಡ್ ನ ಪ್ರಚಂಡ ಕುಳ್ಳ ದ್ವಾರಕೀಶ್ ಅವರು ಮೈಸೂರಿನ ಇಟ್ಟಿಗೆಗೂಡುವಿನಲ್ಲಿ 1942ರ ಆಗಸ್ಟ್ 19ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬಾನುಮಯ್ಯ ಸ್ಕೂಲ್ ನಲ್ಲಿ ಪಡೆದರು. ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪಡೆದರು.
ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್ ಆರಂಭಿಸಿದರು. ಭಾರತ್ ಆಟೋ ಸ್ಪೇರ್ ಹೆಸರಿನ ಶಾಪ್ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು.
24ನೇ ವರ್ಷದಲ್ಲಿ ಪ್ರೊಡ್ಯುಸರ್:
ದಿವಂಗತ ದ್ವಾರಕೀಶ್ ಅವರು ತನ್ನ 24ನೇ ವಯಸ್ಸಿನಲ್ಲಿ ನಿರ್ಮಾಪಕರಾದರು. 1966ರಲ್ಲಿ ಇವರು ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. ತುಂಬಾ ಫಿಕ್ಚರ್ಸ್ ನಡಿ ಈ ಸಿನಿಮಾ ತೆರೆಕಂಡಿತ್ತು.
ಇದಾದ ಬಳಿಕ 1969ರಲ್ಲಿ ಡಾ.ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್ ಮುತ್ತಣ್ಣ ಎಂಬ ಸಿನಿಮಾವನ್ನು ಸ್ವತಂತ್ರವಾಗಿ ನಿರ್ಮಾಣ ಮಾಡಿದರು.
ಡ್ಯಾನ್ಸ್ ರಾಜಾ ಡ್ಯಾನ್ಸ್, ನೀ ಬರೆದ ಕಾದಂಬರಿ, ಶೃತಿ, ಶೃತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296