ತುಮಕೂರು: ಯಾರು ಎಲ್ಲಿ ಬೇಕಾದ್ರು ಸ್ಪರ್ಧೆ ಮಾಡಬಹುದು, ತೊಂದ್ರೆ ಏನು ಇಲ್ಲ. ಯಾರೂ ಎಲ್ಲಿ ಬೇಕಾದ್ರು ಚುನಾವಣೆ ನಿಲ್ಲಬಹುದು. ಚುನಾವಣೆಗೆ ನಿಲ್ಬೇಡಿ ಅಂತಾ ಹೇಳೋಕಾಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತಿರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಅವ್ರೆ ನಿರ್ಧಾರ ಮಾಡಿ, ಅವ್ರು ಎಲ್ಲಿ ಅಭ್ಯರ್ಥಿ ಹಾಕ್ತಾರೋ ಅದು ಅವರಿಗೆ ಸೇರಿದ್ದು, ನಮ್ಮ ಪಕ್ಷ ಸಂಘಟನೆಗೆ ನಾವೇನ್ ಮಾಡ್ಬೇಕೊ, ನಾವು ಅದನ್ನ ಮಾಡ್ತೀವಿ ಎಂದರು.
ಬಿಬಿಎಂಪಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವಾರ್ಡ್ ವಿಂಗಡಣೆ ಬಗ್ಗೆ ಈಗಾಗ್ಲೇ ಹಲವಾರು ಗೊಂದಲಗಳಿವೆ. ಬಹುಶಃ ಚುನಾವಣೆ ನಡಿಯಬಾರ್ದು ಅನ್ನೋ ಹಿನ್ನೆಲೆಯಲ್ಲಿ ಗೊಂದಲಗಳನ್ನ ಸೃಷ್ಟಿ ಮಾಡೋದಕ್ಕೆ ಹೊರಟಿದ್ದಾರೆ. ಮುಂದೆ ಏನೇನಾಗುತ್ತೆ ಅಂತಾ ನೋಡೋಣ ಎಂದು ಅವರು ಹೇಳಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


