ಸಿರಾ: ನಗರದ ಕರ್ನಾಟಕ ಪ್ಲೆಕ್ಸ್ ಮಳಿಗೆಯಲ್ಲಿ ಸಿರಾ ತಾಲ್ಲೂಕು ಕುಂಚ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿಯಾದ ಕಲಾಕಾರ್ ಹುಲಿಕುಂಟೆರವರು ಪುನೀತ್ ರಾಜ್ ಕುಮಾರ್ ರವರ ಕುರಿತು ಮಾತನಾಡುತ್ತ, ಅತೀ ಚಿಕ್ಕವಯಸ್ಸಿನಲ್ಲೇ ಬಹುದೊಡ್ಡ ಸಾಧನೆ ಮಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದು ಹೆತ್ತವರಿಗೆ, ನಾಡಿಗೆ ಕೀರ್ತಿ ತಂದು , ಅಕಾಲಿಕವಾಗಿ ಅಗಲಿದ ಪುನೀತ್ ರಾಜ್ ಕುಮಾರ್ ರವರ ಆತ್ಮಕೆ ಶಾಂತಿ ಸಿಗಲಿ ಎಂದು ಸಂಘದ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.
ಇದೇ ವೇಳೆಯಲ್ಲಿ ಸಂಚಾಲಕರಾದ ಗಿರಿಧರ್ ರವರು ಮಾತನಾಡುತ್ತ, ಪುನೀತ್ ರಾಜ್ ಕುಮಾರ್ ರವರ ಅಕಾಲಿಕವಾಗಿ ಅಗಲಿದ ಪರಿಣಾಮ ನಾಡಿಗೆ ಮತ್ತು ತುಂಬಲಾರದ ನಷ್ಟವುಂಟಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಭಗವಂತನ ಧೈರ್ಯ ಮತ್ತು ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಆರ್ಟ್ ಸನ್ ಶ್ರೀನಿವಾಸ ರವರು ಮತ್ತು ಅಧ್ಯಕ್ಷರಾದ ಕರ್ನಾಟಕ ಆರ್ಟ್ಸ್ ನ ಚಂದ್ರಶೇಖರ್ ರವರು ಮತ್ತು ಉಪಾಧ್ಯಕ್ಷರಾದ ಆನಂದ್ ಆರ್ಟ್ಸ್ ನ ಆನಂದ ರವರು ಸಲಹೆಗಾರರಾದ ವರ್ಣ ಆರ್ಟ್ಸ್ ನ ಸಂಜೀವ್ ರವರು , ಸದಸ್ಯರಾದ , ಭೂತೇಶ್ ರವರು , ಯೋಗೇಂದ್ರರವರು , ವಿಷ್ಣು ಆರ್ಟ್ಸ್ ರವರು , ಲಕ್ಷ್ಮಿ ಕಾಂತ್ ರವರು , ಈರೇಶ್ ರವರು , ಪರಮೇಶ್ ರವರು , ನಟರಾಜ್ ರವರು , ರವಿ ರವರು , ಸಂಘಟನಾ ಕಾರ್ಯದರ್ಶಿ ಮಾರುತಿರವರು , ನಾಣಿ ರವರು ಮತ್ತಿತರರು ಹಾಜರಿದ್ದರು. ಮೇಣದ ಬತ್ತಿ ಹಚ್ಚಿ , ಮೌನಾಚರಣೆ ಮಾಡುವ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700