ಮಧುಗಿರಿ: ತಾಲ್ಲೂಕು, ಪುರವರ ಹೋಬಳಿ, ಬ್ಯಾಲ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳಬಾಗಿಲಪಾಳ್ಯ ಗ್ರಾಮದಲ್ಲಿ ಹೊಸ ವರ್ಷದ ದಿನದಂದು ಗ್ರಾ.ಪಂ ಸದಸ್ಯೆ ರಾಧಮ್ಮ ಅವರ ನೇತೃತ್ವದಲ್ಲಿ ಕುಂದುಕೊರತೆಯ ಸಭೆ ನಡೆಯಿತು.
ಈ ವೇಳೆ ನಿವೇಶನ, ಮಳೆಯಿಂದ ಕುಸಿದ ಮನೆಗಳ ಪರಿಹಾರ, ಪಿಂಚಣಿ, ಚರಂಡಿ, ಶುದ್ದನೀರು, ಪಡಿತರ ಚೀಟಿ ಇನ್ನಿತರೆ ಕೊಂದು ಕೊರತೆಗಳ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪುರವರ ಹೋಬಳಿ ಆರ್.ಐ. ರವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ ತಕ್ಷಣ ಸ್ಪಂದಿಸಿದ ಆರ್.ಐ ರವರು ಸ್ಥಳಕ್ಕೆ ಗ್ರಾಮ ಲೆಕ್ಕಿಗ ಶ್ರೀಧರ್ ರವರನ್ನು ಕಳುಹಿಸಿ ಮಹಜರ್ ಮಾಡಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಈ ವೇಳೆ ಗ್ರಾಮ ಸಹಾಯಕ ಮೂರ್ತಿ, ಗ್ರಾಮದ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಗ್ರಾ.ಪಂ. ಸದಸ್ಯ ಅರುಣ,ವಕೀಲರಾದ ತಿಮ್ಮಣ್ಣ,ಮಂಜುನಾಥ್, ಅಗ್ರಹಾರ ವೆಂಕಟೇಶ್, ಹನುಮಂತಪುರ ತಿಮ್ಮರಾಜು, ಸೌಭಾಗ್ಯ, ಬೇಬಿ, ಆಶಾ, ರೂಪ, ರತ್ಮಮ್ಮ, ವೀದಭದ್ರಯ್ಯ, ಮಧು, ಮಲ್ಲಣ್ಣ, ನಾಗೇಂದ್ರ, ಇತರರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy