ತುಮಕೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರಪ್ರಥಮವಾಗಿ ಪ್ರಜಾಪ್ರಭುತ್ವದಲ್ಲಿ ಕಂಡು ಕೇಳರಿಯದಂತಹ, ಕುತೂಹಲವಾದಂತಹ ಕಾರ್ಯಕ್ರಮ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದೆ ಕಾದು ನೋಡೋಣ ಯಾವ ರೀತಿಯ ಪರಿಣಾಮವಾಗುತ್ತೆ ಅಂತ ಎಂದು ಹೇಳಿದರು.
ಈ ರಾಜ್ಯದ ಬಂಡವಾಳ 54 ಸಾವಿರ ಕೋಟಿ ಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೆ ಹಣ ಹೊಂದಿಸಲು ಯಾರ ತಲೆ ಬೋಳಿಸುತ್ತಾರೆ ಅನ್ನೋದಯ ಮುಖ್ಯ ಎಂದರು.
ಈ ನಡುವೆ ಜನರಿಗೆ ಗ್ಯಾರೆಂಟಿ ಕೊಡುತ್ತೇನೆ ಅಂತಾ ಹೇಳಿದ್ದು ಒಳ್ಳೆಯದೆ. ಜನರು ಕೆಲಸ ಮಾಡದೇ ಸುಖವಾಗಿರುವಂತೆ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಸುಖವಾಗಿರಿ, ಚೆನ್ನಾಗಿರಿ, ಒಳ್ಳೆ ಡ್ರೆಸ್ ಹಾಕೊಳಿ, ಕೋಟ್ ಹಾಕೋಳಿ ಎಂದಿದ್ದಾರೆ. 3 ಸಾವಿರ ತೆಗೆದುಕೊಂಡು ನಿರುದ್ಯೋಗಿಯಾಗಿ, ಶಾಶ್ವತವಾಗಿ ನಿರುದ್ಯೋಗಿಯಾಗಿ ಎಂದು ಮುಖ್ಯ ಮಂತ್ರಿಗಳು ಘೋಷಣೆ ಮಾಡಿದ್ದಾರೆ ಎಂದರು.
ನಿರುದ್ಯೋಗಿಗಳಿಗೆ ಅಪ್ರೆಂಟಿಸ್ ಟ್ರೈನಿಂಗ್ ಕೊಟ್ಟು ಸ್ವಯಂ ಉದ್ಯೋಗ ಮಾಡುವಂತೆ ಉತ್ತೇಜನ ಕೊಡಬೇಕಿತ್ತು ಎಂದು ಹೇಳಿದರು.
ಇನ್ನು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಧಾರ ಮಾಡಿಲ್ಲ ಅಲ್ಲದೆ ಯುವಕರಿಗೆ ಅವಕಾಶ ದೊರೆಯಲಿದೆ ಎಂಬ ಆಶಾಭಾವನೆ ಹೊಂದಿದ್ದೇನೆ ಪಕ್ಷವು ಈ ಕುರಿತಂತೆ ನಿರ್ಧರಿಸಲಿದೆ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA