ತುಮಕೂರು: ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ಸ್ವಂತ ನಿವೇಶನ ನೀಡುವಂತೆ ಸಾಕಷ್ಟು ಮನವಿ ಸಲ್ಲಿಸಿದರೂ, ತುಮಕೂರಿನ ತಹಸೀಲ್ದಾರ್ ಅವರು ಸರ್ಕಾರಿ ಜಾಗ ಲಭ್ಯವಿಲ್ಲ ಎಂದು ವರದಿ ಸಲ್ಲಿಸಿ ಕೈ ಚೆಲ್ಲಿರುವುದರ ವಿರುದ್ಧ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ಸ್ವಂತ ನಿವೇಶನ ನೀಡುವಂತೆ ಒತ್ತಾಯಿಸಿ ಮಹಾವಿದ್ಯಾಲಯ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಸಾಕಷ್ಟು ಪತ್ರ ವ್ಯವಹಾರ ನಡೆಸಿದರೂ, ಫಲಕೊಡದ ಹಿನ್ನೆಲೆಯಲ್ಲಿ ಭಾನುವಾರ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ನಾಗಭೂಷಣ್ ಅವರನ್ನು ಭೇಟಿ ಮಾಡಿ, ಈ ಸಂಬಂಧ ಕಾಲೇಜಿಗೆ ಬೆಂಬಲ ನೀಡುವಂತೆ ಸಂಘದ ಅಧ್ಯಕ್ಷರಾದ ನಟರಾಜು ಜಿ.ಎಲ್. ಹಾಗೂ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಮನವಿ ಮಾಡಿದರು.
ಬಳಿಕ ಈ ಸಂಬಂಧ ಮಾತನಾಡಿದ ಹಂದ್ರಾಳ್ ನಾಗಭೂಷಣ್, ತುಮಕೂರು ಜಿಲ್ಲೆಯು ಕಲೆಗೆ ಹೆಸರಾದ ಜಿಲ್ಲೆ, ರಾಜ್ಯದಲ್ಲಿ ಕಲಾವಿದರ ಸಾಲಿನಲ್ಲಿ ಪ್ರಖ್ಯಾತಿ ಪಡೆದ ಗುಬ್ಬಿ ವೀರಣ್ಣ ರವರು ನಟ, ನಟಿಯರಾದ ಜಯಶ್ರೀ, ನರಸಿಂಹರಾಜು, ಹೊನ್ನಾವಳಿ ಕೃಷ್ಣ, ಮಂಜುಳ ಇನ್ನು ಅನೇಕ ಎಲೆ ಮರೆಯ ಕಾಯಿಯಂತೆ ಮಹಾನ್ ಕಲಾವಿದರು ನೆಲೆಸಿದ್ದ, ನೆಲೆಸಿರುವ ಜಿಲ್ಲೆ. ಈ ಜಿಲ್ಲೆಯ ಹೃದಯ ಭಾಗದಲ್ಲಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿಗೆ ನಿವೇಶನವಿಲ್ಲದೆ ಅತಂತ್ರ ಸ್ಥಿತಿಗೆ ತಲುಪಿರುವುದು ದುರಂತ ಎಂದು ಅಭಿಪ್ರಾಯಪಟ್ಟರು.
ಈ ಬಗ್ಗೆ ಹಳೆಯ ವಿದ್ಯಾರ್ಥಿ ಸಂಘ ಸಾಕಷ್ಟು ಪತ್ರ ವ್ಯವಹಾರಗಳು ಮಾಡಿದ್ದರೂ ಕೂಡ, ನಿವೇಶನ ಮುಂಜೂರಾತಿಗೆ ಸಂಬಂಧಿಸಿದ ರಾಜಸ್ವ ನಿರೀಕ್ಷಕರ ವರದಿ ಮೇರೆಗೆ ತುಮಕೂರಿನ ತಹಸೀಲ್ದಾರ್ ಮಹಾನುಭವರು ಸರ್ಕಾರಿ ಜಾಗ ಲಭ್ಯವಿಲ್ಲ ಎಂದು ವರದಿ ಸಲ್ಲಿಸಿ ಕೈ ಚೆಲ್ಲಿದ್ದಾರೆ. ಈ ವಿಷಯದ ಕುರಿತು ಹಾಗು ಸ್ಥಳೀಯ ನಗರ ಶಾಸಕರೂ, ಸಂಸದರು ಕೂಡ ಕೇವಲ ಪೋಸ್ಟ್ ಮ್ಯಾನ್ ರೀತಿ ಪತ್ರ ಬರೆದು ಮೌನ ವಹಿಸಿರುವ ಹಿಂದಿನ ಮರ್ಮವಾದರು ಏನು ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಯಮಾಡಿ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಜಿಲ್ಲೆಯ ಕಲೆಯನ್ನು ಕೊಲೆ ಮಾಡಲು ಹೊರಟಿರುವವರಿಗೆ ಭೋದನೆ ಮಾಡಿ, ನಗರದ ಸರ್ಕಾರಿ ಸದರಿ ಕಾಲೇಜಿಗೆ ಕಾಯಕಲ್ಪ ನೀಡಬೇಕು ಎಂದು ಹಂದ್ರಾಳ್ ನಾಗಭೂಷಣ್ ಒತ್ತಾಯಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700