nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗ್ಯಾರಂಟಿ ಯೋಜನೆ ಎಷ್ಟೇ ಹೊರೆಯಾದರೂ ಮುಂದುವರಿಯಬೇಕು: ಡಿ.ಕೆ.ಸುರೇಶ್

    March 1, 2026

    ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯ; ದೃಢಪಡಿಸಿದ ಇರಾನ್ ಸರ್ಕಾರಿ ಟಿವಿ

    March 1, 2026

    ಅಕ್ಕಿರಾಂಪುರ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ: ಪರಿಶೀಲನೆ

    February 28, 2026
    Facebook Twitter Instagram
    ಟ್ರೆಂಡಿಂಗ್
    • ಗ್ಯಾರಂಟಿ ಯೋಜನೆ ಎಷ್ಟೇ ಹೊರೆಯಾದರೂ ಮುಂದುವರಿಯಬೇಕು: ಡಿ.ಕೆ.ಸುರೇಶ್
    • ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯ; ದೃಢಪಡಿಸಿದ ಇರಾನ್ ಸರ್ಕಾರಿ ಟಿವಿ
    • ಅಕ್ಕಿರಾಂಪುರ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ: ಪರಿಶೀಲನೆ
    • ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ನೂತನ ಅಧ್ಯಕ್ಷರಾಗಿ ವಿಭೂತಿ ಸಿದ್ದಪ್ಪ ನೇಮಕ
    • ಧಾರವಾಡ:  ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ
    • ಉದ್ಯೋಗ ಪಡೆಯಲು ಯುವಕರ ಪ್ರಯತ್ನ ನಿರಂತರವಾಗಿರಲಿ: ಶಾಸಕ ಎಸ್.ಎನ್.ಚನ್ನಬಸಪ್ಪ
    • ಬಳ್ಳಾರಿ: ಟ್ರಾಫಿಕ್ ಸಮಸ್ಯೆ ಹಂತ–ಹಂತವಾಗಿ ಪರಿಹಾರ ಕ್ರಮ: ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್
    • ಬಳ್ಳಾರಿ:  ಪಠ್ಯಪುಸ್ತಕಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ: ಪ್ರೊ.ಎಂ.ಮುನಿರಾಜು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸುಸ್ಥಿರ ಭವಿಷ್ಯದ ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಇ-ಕೆಆರ್‌ ಡಿಐಪಿ ಪ್ರಾರಂಭ: ಸಚಿವ ಎನ್‌ ಎಸ್‌ ಭೋಸರಾಜು
    ರಾಜ್ಯ ಸುದ್ದಿ October 12, 2023

    ಸುಸ್ಥಿರ ಭವಿಷ್ಯದ ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಇ-ಕೆಆರ್‌ ಡಿಐಪಿ ಪ್ರಾರಂಭ: ಸಚಿವ ಎನ್‌ ಎಸ್‌ ಭೋಸರಾಜು

    By adminOctober 12, 2023No Comments2 Mins Read
    n s bhosaraju

    ಬೆಂಗಳೂರು: ಸುಸ್ಥಿರ ಭವಿಷ್ಯದ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹ ಹಾಗೂ ಅವುಗಳ ಫಲವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇ-ಕೆಆರ್‌ ಡಿಐಪಿ (e-KRDIP ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ಫಾರಂ Karnataka R&D Innovation Platform e-KRDIP) ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯಿಂದ ಅಗತ್ಯ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸೇರಿದಂತೆ ಸಂಶೋಧನೆಗೆ ಒತ್ತು ನೀಡುವ ಈ ಎರಡೂ ಸಂಸ್ಥೆಗಳನ್ನ ಶೀಘ್ರದಲ್ಲೇ ಪ್ರಾರಂಭಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

    ಇಂದು ನಗರದಲ್ಲಿ ಶೆಲ್‌ ಇಂಡಿಯಾ “ಚೇಂಜ್‌ ಮೇಕರ್ಸ್‌ ಆಫ್‌ ಟುಮಾರೋ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಕರ್ನಾಟಕ ರಾಜ್ಯ ಕೈಗಾರಿಕಾ ಸ್ನೇಹಿ ರಾಜ್ಯಗಳಲ್ಲಿ ಪ್ರಮಖವಾಗಿದೆ. ಸ್ಟಾರ್ಟ್‌ ಅಪ್ ‌ಗಳ ಪ್ರೋತ್ಸಾಹಕ್ಕೆ, ಹೊಸ ಉದ್ಯಮಗಳ ಸ್ಥಾಪನೆಗೂ ರಾಜ್ಯ ಸರಕಾರ ಉತ್ತಮ ಸಹಕಾರ ನೀಡುತ್ತಿದೆ. ರಾಜ್ಯ ಸರಕಾರದ ಕ್ರಾಂತಿಕಾರಿ ಯೋಜನೆಗಳ ಪರಿಣಾಮದಿಂದ ವಿಶ್ವದ ಪ್ರಮುಖ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿ ತಮ್ಮ ಘಟಕಗಳನ್ನು ಪ್ರಾರಂಭಿಸಿವೆ. ರಾಜ್ಯದಲ್ಲಿ ಸಂಶೋಧನೆಗೆ ಉತ್ತಮ ಪರಿಸರವಿದ್ದು, ಉತ್ತಮ ಮಾನವ ಸಂಪನ್ಮೂಲ ಕೂಡಾ ಲಭ್ಯವಿದೆ. ಇದರಿಂದಾಗಿ ಶೆಲ್‌ ಕಂಪನಿ ತಮ್ಮ ಅತಿದೊಡ್ಡ ಸಂಶೋಧನಾ ಕೇಂದ್ರವನ್ನು ಇಲ್ಲಿ ಸ್ಥಾಪಿಸಿದೆ. ಹವಾಮಾನ ಬದಲಾವಣೆಯಿಂದ ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿರುವ ಸಂಧರ್ಭದಲ್ಲಿ, ಹೊಸ ಆವಿಷ್ಕಾರಗಳಿಗೆ ಉತ್ತೇಜಿಸುವುದು ಅತ್ಯವಶ್ಯ. ನಮ್ಮ ಸರಕಾರ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.


    Provided by
    Provided by

    ರಾಜ್ಯದಲ್ಲಿ ಸ್ಟಾರ್ಟ್‌ ಅಪ್‌ ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್‌ ಸ್ಥಾಪಿಸಲು ಆಯವ್ಯಯದಲ್ಲಿ ಘೋಷಣೆಯಾಗಿತ್ತು. ಈಗ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ. ರಾಜ್ಯವನ್ನು ಸಂಶೋಧನಾ ಹಬ್‌ ಆಗಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಹೊಸ ಸಂಶೋಧನೆಗಳು ಫಲ ಜನ ಸಾಮಾನ್ಯರಿಗೆ, ಸ್ಟಾರ್ಟ್‌ ಅಪ್‌ಗಳಿಗೆ, ಉದ್ದಿಮೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಇ-ಕೆಆರ್‌ ಡಿಐಪಿ (ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ ಫಾರಂ Karnataka R&D Innovation Platform e-KRDIP) ಯನ್ನು ಕೂಡಾ ಸ್ಥಾಪಿಸಲಾಗುತ್ತಿದೆ. ಇದಕ್ಕೂ ಕೂಡಾ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಸಂಸ್ಥೆಗಳ ಪ್ರಾರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

    ಇ-ಕೆಆರ್‌ ಡಿಐಪಿ (ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ ಫಾರಂ e-KRDIP): ಎಂಎಸ್‌ಎಂಇ ಗಳು ಹಾಗೂ ಸ್ಟಾರ್ಟ್‌ ಅಪ್‌ ಗಳು ಹೊರಗಿನ ಹೊಸ ಸಂಶೋಧನೆಗಳು, ತಂತ್ರಜ್ಞಾನ, ಸಂಶೋಧನಾ ಪಾಲುದಾರಿಕೆ ಮತ್ತು ಜ್ಞಾನದ ಆಧಾರದ ಮೇಲೆ ತಮ್ಮ ನೂತನ ಉತ್ಪನ್ನಗಳನ್ನ ಹಾಗೂ ಸೇವೆಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಹೊಸ ಸಂಶೋಧನೆಗಳು ಮತ್ತು ರಿಸರ್ಚ ಹಾಗೂ ಡೆವಲಪ್‌ಮೆಂಟ್‌ಗಳ ಆಧಾರದ ಮೇಲೆ ಜನರಿಗೆ ಅನುಕೂಲ ಮಾಡಿಕೊಡುವಂತಹ ಉಪಯುಕ್ತ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನಾಗಿಸುವ ನಿಟ್ಟಿನಲ್ಲಿ ಇನ್ನೋವೇಷನ್‌ ಫ್ಲಾಟ್‌ ಫಾರಂ ಸಹಾಯ ಮಾಡಲಿದೆ. ಉದ್ದಿಮೆಗಳು ಮತ್ತು ರಾಜ್ಯದ ಆರ್ಥಿಕತೆಗೆ ಇಂಬು ನೀಡುವ ನಿಟ್ಟಿನಲ್ಲಿ ಎಂಎಸ್‌ ಎಂಇ, ಉದ್ದಿಮೆಗಳು, ಸ್ಟಾರ್ಟ್‌ ಅಪ್‌ ಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮಧ್ಯೆ ಸಮನ್ವಯ ಸಾಧಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಅಲ್ಲದೇ, ಆರ್‌&ಡಿ ಕಾರ್ಯಕ್ರಮಗಳ ಪರಿಣಾಮಗಳನ್ನ ಮೇಲ್ವಿಚಾರಣೆಯನ್ನು ಈ ಸಂಸ್ಥೆ ಮಾಡಲಿದೆ. ಒಟ್ಟಾರೆಯಾಗಿ, ಇ-ಕೆಆರ್‌ ಡಿಐಪಿ ಪ್ಲಾಟ್‌ಫಾರಂ ಸಂಶೋಧನೆ, ಶೈಕ್ಷಣಿಕ ಹಾಗೂ ಉದ್ದಿಮೆಗಳ ಪ್ರಮುಖರನ್ನ ಒಂದೆಡೆ ಸೇರಿಸುವ ಮೂಲಕ ರಿಸರ್ಚ್‌ ಮತ್ತು ಡೆವಲಪ್‌ ಮೆಂಟ್ ‌ಗಳ ಉಪಯುಕ್ತತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.

    ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಶೆಲ್‌ ಕಂಪನಿ ನಡೆಸುತ್ತಿರುವ ಸಂಶೋಧನೆಗಳು ಶ್ಲಾಘನೀಯ. ಸುಸ್ಥಿರ ಇಂಧನಗಳನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಪರಿಸರದ ಮೇಲಿನ ಹೊರೆಯನ್ನು ತಗ್ಗಿಸಬಹುದಾಗಿದೆ. ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಸೇರಿರುವವರ ಪಾತ್ರವೂ ಹಿರಿದಾಗಿದೆ. ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪರಿಸರ ಮತ್ತು ಹವಾಮಾನದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಆವಿಷ್ಕಾರಗಳನ್ನು ಮಾಡಿ ಎಂದು ಸಚಿವರು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಶೆಲ್‌ ಇಂಡಿಯಾ ಅಧ್ಯಕ್ಷರಾದ ಮಾನ್ಸಿ ಮದನ್‌ ತ್ರಿಪಾಠಿ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ್ದ ನೂರಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.

    admin
    • Website

    Related Posts

    ಗ್ಯಾರಂಟಿ ಯೋಜನೆ ಎಷ್ಟೇ ಹೊರೆಯಾದರೂ ಮುಂದುವರಿಯಬೇಕು: ಡಿ.ಕೆ.ಸುರೇಶ್

    March 1, 2026

    ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡುವುದರಲ್ಲಿ ತಪ್ಪೇನಿದೆ?: ಡಿ.ಕೆ. ಶಿವಕುಮಾರ್

    February 27, 2026

    ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ: ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

    February 27, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss

    ಗ್ಯಾರಂಟಿ ಯೋಜನೆ ಎಷ್ಟೇ ಹೊರೆಯಾದರೂ ಮುಂದುವರಿಯಬೇಕು: ಡಿ.ಕೆ.ಸುರೇಶ್

    March 1, 2026

    ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ನೀಡಿರುವ ವಾಗ್ದಾನವಾಗಿದ್ದು, ಆರ್ಥಿಕ ಹೊರೆಯಾದರೂ ಸಹ ಕೊಟ್ಟ…

    ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯ; ದೃಢಪಡಿಸಿದ ಇರಾನ್ ಸರ್ಕಾರಿ ಟಿವಿ

    March 1, 2026

    ಅಕ್ಕಿರಾಂಪುರ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ದಿಢೀರ್ ಭೇಟಿ: ಪರಿಶೀಲನೆ

    February 28, 2026

    ಕರ್ನಾಟಕ ಮಾದರ ಮಹಾಸಭಾ ತಾಲ್ಲೂಕು ನೂತನ ಅಧ್ಯಕ್ಷರಾಗಿ ವಿಭೂತಿ ಸಿದ್ದಪ್ಪ ನೇಮಕ

    February 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.