ಕೊರಟಗೆರೆ: ಬೂದಗವಿ (ಸಿದ್ದರಬೆಟ್ಟ) ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮಿಕಾಂತ ಸಿ.ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಕವಿತಾ ರಮೇಶ್ ಮುಂದುವರಿದಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ(ಸಿದ್ದರಬೆಟ್ಟ) ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆ ಇದಾಗಿದೆ.
ಹಿಂದುಳಿದ “ಬ” ವರ್ಗಕ್ಕೆ ಮೀಸಲಿದ್ದ ಸ್ಥಾನವಾಗಿದ್ದು. ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಮಲ್ಲೇಕಾವು ಕ್ಷೇತ್ರದ ಎಂ.ಎನ್.ಬಸವರಾಜು ಮತ್ತು ಚನ್ನರಾಯನದುರ್ಗ ಕ್ಷೇತ್ರದ ಲಕ್ಷ್ಮೀಕಾಂತ್ ಸಿ.ಕೆ. ನಾಮಪತ್ರ ಸಲ್ಲಿಸಿದ್ದರು.
ಸರ್ವ ಸದಸ್ಯರ ಒಗ್ಗಟ್ಟಿನ ಚುನಾವಣೆಯನ್ನಾಗಿಸಲು ತೀರ್ಮಾನಿಸಿ ಮಲ್ಲೇಕಾವು ಕ್ಷೇತ್ರದ ಬಸವರಾಜು ತಮ್ಮ ನಾಮಪತ್ರ ವಾಪಸ್ ಪಡೆದಿದ್ದರು.
ನೂತನ ಉಪಾಧ್ಯಕ್ಷರಾಗಿ ಚನ್ನರಾಯನದುರ್ಗ ಕ್ಷೇತ್ರದ ಲಕ್ಷ್ಮೀಕಾಂತ್ ಸಿ ಕೆ ಅವಿರೋಧ ಆಯ್ಕೆಯಾಗಿ ಅಧಿಕಾರಿ ಸ್ವೀಕರಿಸಿದ್ದಾರೆ. ಲಕ್ಷ್ಮೀಕಾಂತ್ ರವರ ಅಭಿಮಾನಿಗಳು ಗ್ರಾಮಸ್ಥರು ಸದಸ್ಯರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣೆ ಅಧಿಕಾರಿಯಾದ ತಹಶೀಲ್ದಾರ್ ಮಂಜುನಾಥ್ ಕೆ.ರವರಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಸನ್ಮಾನಿಸಿ ಧನ್ಯವಾದ ತಿಳಿಸಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಿಕಾಂತ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಶ್ರಮಿಸುತ್ತೇವೆ. ರೈತರ ಸಾರ್ವಜನಿಕರ ಕೆಲಸಕ್ಕೆ ತೊಂದರೆ ಆಗದಂತೆ ಎಚ್ಚರವಹಿಸಿ ಕೆಲಸ ಮಾಡುತ್ತೇವೆ. ಗ್ರಾಮಗಳ ನೈರ್ಮಲ್ಯ, ಸ್ವಚ್ಚತೆ, ಬೀದಿ ದೀಪ, ಕುಡಿಯುವ ನೀರು, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಮತ್ತು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಿಸಲು ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ RI ಪ್ರತಾಪ್, VA ರಮೇಶ್, ಉಪ ತಹಶೀಲ್ದಾರ್ A G ರಾಜು, ಚುನಾವಣಾ ಶಿರಸ್ತೇದಾರ್ ಮಂಜುನಾಥ್, ರವಿ ಶಂಕರ್, ದೊಡ್ಡೆ ಗೌಡ, ಸ್ಥಳೀಯ ಮುಖಂಡರು, ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಓ ಸಿಬ್ಬಂದಿ ಹಾಜರಿದ್ದರು..
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4