ತುರುವೇಕೆರೆ: ಕ್ಷೇತ್ರಕ್ಕೆ ಮಾಜಿ ಶಾಸಕರಾದ ಜಯರಾಮಣ್ಣ ನವರು ನೀರಿನ ಹೋರಾಟಕ್ಕೆ ಶಾಶ್ವತ ಪರಿಹಾರವನ್ನು ನೀಡಿದ್ದಾರೆ ಹಾಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಯೋಗೀಶ್ ರವರೇ ಮೊದಲು ಕೀಳು ಮಟ್ಟದ ರಾಜಕಾರಣ ಬಿಡಿ ನಾಲಿಗೆ ಬಿಗಿ ಹಿಡಿದು ಮಾತನಾಡಿ ಯುವ ಮೋರ್ಚಾದ ಅಧ್ಯಕ್ಷ ಗೌರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಗೌರೀಶ್ ಅವರು, ಜೆಡಿಎಸ್ ಪಕ್ಷದ ವಕ್ತಾರಾದ ವೆಂಕಟಪುರ ಯೋಗೇಶ್ ಮಾಜಿ ಶಾಸಕರಾದ ಮಸಾಲೆ ಜಯರಾಮ್ ಅವರು ಕಮಿಷನ್ ದಂಧೆಗಾಗಿ ಕೆಲಸ ಮಾಡಿದ್ದಾರೆ ಎಂದು ನೀಡಿರುವ ಹೇಳಿಕೆಯನ್ನ ಖಂಡಿಸಿದರು.
ಅವರಿಗೂ ಗೊತ್ತಿದೆ ಮತ್ತೆ ಹೇಳುತ್ತಾರೆ ತೂಬುಗಳನ್ನು ಹೊಡೆದು ನೀರು ಬಿಡುತ್ತೇವೆ ಅಷ್ಟು ಪೌರುಷ ನಮಗಿದೆ ಎಂದು ತೂಬನ್ನು ಹೊಡೆದು ಹಾಕಿ ನೀರು ಬಿಡುವ ಅವಶ್ಯಕತೆ ಇಲ್ಲ, ಇವತ್ತು ದಂಡಿನಶಿವರ ಹೋಬಳಿಯ ಕೆರೆಗಳಿಗೆ ನೀರು ಹರಿಸುವ ಡಿ 10 ತೂಬು ಆಗಿರಬಹುದು ನಮ್ಮ ಮಾಜಿ ಸಣ್ಣ ನೀರಾವರಿಯ ಸಚಿವರಾದಂತಹ ಮಾಧುಸ್ವಾಮಿಯವರು ಮತ್ತು ಮಾಜಿ ಶಾಸಕರಾದ ಜಯರಾಮಣ್ಣ ನವರು ಸೇರಿ ನೀರಿನ ಹೋರಾಟಕ್ಕೆ ಶಾಶ್ವತ ಪರಿಹಾರವನ್ನು ನೀಡಿದ್ದಾರೆ. ಹಾಲಿ ಶಾಸಕರು ಕಳೆದ ಬಾರಿ ಶಾಸಕರಾಗಿದ್ದಾಗ ನೀರಿನ ಹೋರಾಟಕ್ಕಾಗಿ ಶಾಸಕರು ಹಲವಾರು ಕೇಸುಗಳನ್ನು ಹಾಕಿಸಿಕೊಂಡಿದ್ದಾರೆ ಅವುಗಳು ಇನ್ನು ತೀರ್ಮಾನ ಮಾಡಿಸಿಕೊಂಡಿಲ್ಲ ತಾವರೆಕೆರೆಯಿಂದ ದಂಡಿನಶಿವರದ ವರೆಗೆ ಆಗಿರುವ ರಸ್ತೆ ಮತ್ತೆ ಕಲ್ಲೂರು ರಸ್ತೆ ಉದಾಹರಣೆ ಸಾಕು, ಯಾವುದೇ ಕಮಿಷನ್ ಆಸೆಗಾಗಿ ಈ ಕೆಲಸ ಮಾಡಿಲ್ಲ ಜಯರಾಮಣ್ಣನವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಎಂದರು.
ಯೋಗೀಶ್ ರವರೇ ಮೊದಲು ನಾಲಿಗೆ ಬಿಗಿ ಹಿಡಿದು ಮಾತನಾಡಿ, ಕ್ಷೇತ್ರದ ಜನತೆಗೆ ಗೊತ್ತಿದೆ ಜಯರಾಮಣ್ಣನವರ ಕಾಲದಲ್ಲಿ ಏನು ಕೆಲಸ ಆಗಿದೆ ಅಂತ. ಅವರ ಅವಧಿಯಲ್ಲಿ ದಂಡಿನ ಶಿವರದಿಂದ ದುಂಡ ವರೆಗೂ ಒಳ್ಳೆಯ ರಸ್ತೆಯನ್ನು ಮಾಡಿಸಿದ್ದಾರೆ, ಈಗ ಮಾತನಾಡುವವರಿಗೆ ಗೊತ್ತೋ ಗೊತ್ತಿಲ್ಲವೋ ಊರಲ್ಲಿ ಇದ್ದರೂ ಇರಲಿಲ್ಲನವೋ ನಮಗೆ ಗೊತ್ತಿಲ್ಲ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳ ಸುತ್ತೋಲೆಯನ್ನು ಕೊಡುತ್ತೇವೆ, ಮನೆಯಲ್ಲಿ ಕುಳಿತುಕೊಂಡು ಬಿಡುವಿನ ವೇಳೆಯಲ್ಲಿ ಓದಿ. ಆಗ ಗೊತ್ತಾಗುತ್ತದೆ ಜಯರಾಮಣ್ಣನವರು ಏನು ಕೆಲಸ ಮಾಡಿದ್ದಾರೆ ಎಂದು, ಅಧಿಕಾರಕ್ಕಾಗಿ ಕೆಲವರ ಕುತಂತ್ರದಿಂದ ಜಯರಾಮಣ್ಣನವರು, ಸೋತಿರಬಹುದು. ಆದರೂ ಮತದಾರರು 58000ಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ಮತದಾರರು ನಮ್ಮ ಪಕ್ಷದ ಬಲವನ್ನು ತೋರಿದ್ದಾರೆ, ಮುಂದಿನ ದಿನಗಳಲ್ಲಿ ಅವರ ಶಕ್ತಿ ಇರುತ್ತದೆ ಹೋರಾಟ ಮಾಡುತ್ತಾರೆ ಮತ್ತೆ ಈ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಆದ್ದರಿಂದ ವೆಂಕಟಾಪುರ ಯೋಗೀಶ್ ರವರೆ ತಾವು ಮೊನ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ಮಾತನ್ನು ವಾಪಸ್ಸು ಪಡೆಯಬೇಕು ಈ ದಿನ ಅವರಿಗೆ ಎಚ್ಚರಿಕೆನೀಡುತ್ತಿದ್ದೇವೆ ಎಂದರು.
ಮುಖಂಡರಾದ ವಿ.ಬಿ.ಸುರೇಶ್ ಮಾತನಾಡಿ, ಮೊನ್ನೆ ಜೆಡಿಎಸ್ ಪಕ್ಷದ ಸುದ್ದಿಗೋಷ್ಠಿಯಲ್ಲಿ ವೆಂಕಟಾಪುರ ಯೋಗೀಶ್ ರವರು ಜಯರಾಮಣ್ಣ ನವರ ವಿರುದ್ಧ ಇಲ್ಲಸಲ್ಲದ ಆರೋಪದ ಹೇಳಿಕೆಯನ್ನು ನೀಡಿದ್ದಾರೆ ಜಯರಾಮಣ್ಣನವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಜೈರಾಮಣ್ಣನವರು ಒಂದಲ್ಲ ನೂರಾರು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ನೆನೆಗುದಿಗೆ ಬಿದ್ದಿದ್ದ ದಬ್ಬೇಗಟ್ಟ ತುರುವೇಕೆರೆಯ ಮುಖ್ಯ ರಸ್ತೆಯನ್ನು 25 ಕೋಟಿ ರೂ ವೆಚ್ಚದಲ್ಲಿ ಮಾಡಿದ್ದಾರೆ. ಮೊದಲಿಗೆ ಈ ರಸ್ತೆಯಲ್ಲಿ ಗರ್ಭಿಣಿಯ ಹೆಂಗಸರು ಪ್ರಯಾಣಿಸುವ ಹಾಗೆ ಇರಲಿಲ್ಲ ರಸ್ತೆ ಮಧ್ಯದಲ್ಲಿಯೇ ಡೆಲಿವರಿಗಳು ಆಗುವಂತಹ ಸನ್ನಿವೇಶಗಳು ನಡೆದು ಹೋಗಿದ್ದವು. ಗಬ್ಬೆಘಟ್ಟ ಭಾಗದ ಜನರ ಒತ್ತಾಯದ ಮೇರೆಗೆ ಈ ರಸ್ತೆಯನ್ನು ಮಾಡಿದ್ದಾರೆ ಎಂದರು.
ಆದರೆ ಹಾಲಿ ಶಾಸಕರು 20 ವರ್ಷಗಳ ಕಾಲ ಶಾಸಕರಾಗಿದ್ದರೂ ಈ ಕೆಲಸ ಏಕೆ ಮಾಡಿರಲಿಲ್ಲ ಎಂದು ಯಾವತ್ತು ಪ್ರಶ್ನೆಯನ್ನು ಮಾಡಿಲ್ಲ, ಆದರೆ ಪದೇಪದೇ ಜಯರಾಮಣ್ಣನವರ ಬಗ್ಗೆ ಮಾತನಾಡುವುದು ಸರಿಯಲ್ಲ, ನಾನು ಒಂದು ಮಾತನ್ನು ಹೇಳುತ್ತೇನೆ ತಾಳಕೆರೆ ಸುಬ್ರಹ್ಮಣ್ಯಂ ರವರನ್ನು ಹೊರತುಪಡಿಸಿ ಅನೇಕ ಶಾಸಕರು ಕೆಲಸ ಮಾಡಿದ್ದಾರೆ, ಅವರೆಲ್ಲರನ್ನೂ ಮೀರಿ ಮಸಾಲ ಜಯರಾಮಣ್ಣನವರು ಮಿಗಿಲಾಗಿ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಮ್ಮಸಂದ್ರ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ನರಸಿಂಹಯ್ಯ, ಅರಳೀಕೆರೆ ಬಸವರಾಜು, ಅಶೋಕ್ , ಕುಮಾರ್ ಜಗದೀಶ್, ಅಮ್ಮಸಂದ್ರ ಭರತ್, ರಾಕೇಂದು, ತನುಜ್ ಗೌಡ, ದಯಾನಂದ ಮತ್ತಿತರರಿದ್ದರು
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ