‘ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಕೊಲೆ ಪ್ರಕರಣದ ಹಿಂದಿನ 10 ವರ್ಷಗಳಲ್ಲಿ ನೂರಾರು ಅಸಹಜ ಸಾವಿನ ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಪ್ರಕರಣಗಳ ಸಮಗ್ರ ತನಿಖೆಗೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು’ ಎಂದು ಪ್ರಗತಿಪರ ಸಂಘಟನೆಗಳ ಪ್ರಮುಖರು ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ದ್ರಾವಿಡ ಸಂಘದ ಅಧ್ಯಕ್ಷ ಅಗ್ನಿ ಶ್ರೀಧರ್, ‘ಸೌಜನ್ಯಾ ಪ್ರಕರಣ ಧರ್ಮಸ್ಥಳದ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಸೌಜನ್ಯಾ ರಾಜ್ಯದ ಎಲ್ಲ ಮನೆಗಳ ಮಗಳಾಗಿದ್ದಾಳೆ. ಈ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಕಾನೂನಾತ್ಮಕ ಹೋರಾಟ ನಮ್ಮ ಮುಂದಿರುವ ಆಯ್ಕೆ, ಈ ಪ್ರಕರಣದ ಬಳಿಕ ಅಲ್ಲಿ ಅಸಹಜ ಮರಣ ವರದಿಯಾಗಿಲ್ಲ. ಆದ್ದರಿಂದ, ಇದೊಂದೇ ಪ್ರಕರಣದ ಮರು ತನಿಖೆಯ ಬದಲು, ಅಲ್ಲಿ ಹಿಂದಿನ 10 ವರ್ಷಗಳ ಕಾಲ ನಡೆದ ಎಲ್ಲ ಅಸಹಜ ಮರಣ ಪ್ರಕರಣಗಳ ತನಿಖೆ ನಡೆಯಬೇಕು. ಆಗ ನಿಜವಾದ ಅಪರಾಧಿ ಯಾರೆಂಬುದು ತಿಳಿಯುತ್ತದೆ. ಹೈಕೋರ್ಟ್‌ನಲ್ಲಿ ಮುಂದಿನ 15 ದಿನಗಳ ಒಳಗೆ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


