ತಿರುಪತಿ ತಿರುಮಲ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಕಾಲು ದಾರಿಯಲ್ಲಿ ಮತ್ತೆ ಚಿರತೆ ಕರಡಿ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಜನರಿಗೆ ಓಡಾಡುವಾಗ ಅತಿ ಎಚ್ಚರಿಕೆಯಿಂದ ಇರಲು ಟಿಟಿಡಿ ತಿಳಿಸಿದೆ. ನಾರಾಯಣಸ್ವಾಮಿ ದೇಗುಲ ರಸ್ತೆಯಲ್ಲಿ ಕರಡಿ ಸಂಚರಿಸಿದ್ದು ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲದಿನಗಳ ಹಿಂದಷ್ಟೇ ಚಿರತೆಯೊಂದು ಬಾಲಕಿಯನ್ನು ಕೊಂದು ಹಾಕಿದ್ದ ಕಾರಣ ಈ ಬಾರಿ ಭಕ್ತಾದಿಗಳಿಗೆ ಸಂಚರಿಸುವಾಗ ಬಡಿಗೆ ಹಿಡಿದು, ಮಕ್ಕಳನ್ನು ಒಂಟಿಯಾಗಿ ಬಿಟ್ಟು ತೆರಳದಂತೆ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ.


