ಮೈಸೂರು: ಮಾಜಿ ಶಾಸಕರೊಬ್ಬರ ಜಮೀನಿನ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 7 ವರ್ಷದ ಬೃಹತ್ ಗಂಡು ಚಿರತೆ ಬಿದ್ದಿದ್ದು, ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ಪಟ್ಟಣದ ಸಮೀಪ ಇರುವ ಮಾಜಿ ಶಾಸಕ ಎನ್.ನಾಗರಾಜು ಅವರಿಗೆ ಸೇರಿದ ಜಮೀನಿನ ಬಳಿ ಚಿರತೆಗೆ ಬೋನು ಇರಿಸಲಾಗಿತ್ತು. ಇದೀಗ ಕೊನೆಗೂ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಹೆಚ್‌ಡಿ ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಹೊಂದಿಕೊಂಡಂತೆ ಇರುವ ಜಮೀನಿನ ರೈತರಾದ ದಶರಥ, ಎನ್.ನಾಗರಾಜು, ವಿವೇಕ, ಗುರುಮಲ್ಲು, ಸಣ್ಣಪ್ಪ, ಸೋಮಣ್ಣ, ಸಣ್ಣಯ್ಯರ ಜಮೀನುಗಳಲ್ಲಿ ಕಳೆದ ಒಂದು ತಿಂಗಳ ಒಳಗೆ ನೂರು ಅಡಿಗಳ ಅಂತರದಲ್ಲಿ 4 ಚಿರತೆ ಸೆರೆಯಾಗಿತ್ತು. ಇದೀಗ ಮತ್ತೊಂದು 7 ವರ್ಷದ ಚಿರತೆ ಸೆರೆ ಸಿಕ್ಕಿರುವುದು ಆತಂಕ ಹೆಚ್ಚಿಸಿದೆ.
ಈ ಚಿರತೆಗಳು ಈ ಭಾಗದಲ್ಲಿ ರೈತರ ಹಸು, ಕರು ಮೇಕೆ ಹಾಗೂ ಸಾಕು ನಾಯಿಗಳನ್ನು ತಿಂದು ಹಾಕುತ್ತಿದ್ದವು. ಪ್ರತಿ ಭಾರಿ ಚಿರತೆ ಸಿಕ್ಕಿದ ನಂತರ ಮತ್ತೆ ಜಮೀನುಗಳಲ್ಲಿ ಚಿರತೆ ಓಡಾಟ ರೈತರಿಗೆ ಕಾಣಿಸಿಕೊಳ್ಳುತಿತ್ತು. ಹೀಗಾಗಿ ರೈತರು ಮತ್ತೆ ಬೋನನ್ನು ಜಮೀನಿನಲ್ಲಿ ಇರಿಸುವಂತೆ ಒತ್ತಾಯಿಸುತ್ತಿದ್ದರು. ಪ್ರತಿ ದಿನ ಬೋನಿನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗುತಿತ್ತು. ನಾಯಿಯ ವಾಸನೆ ಹಿಡಿದು ಬಂದ ಚಿರತೆ ಸದ್ಯ ಬೋನಿನಲ್ಲಿ ಸೆರೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296