ಚಿಕ್ಕಬಳ್ಳಾಪುರ: ಚಿರತೆ ಮರಿಯೊಂದು ಗುಡಿಬಂಡೆ ಪೊಲೀಸ್ ಠಾಣೆಯ ಆವರಣದಲ್ಲಿದ್ದ ಹಳೆಯ ಕಾರಿನಲ್ಲಿ ಅವಿತುಕುಳಿತ ಘಟನೆ ನಡೆದಿದೆ.
ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯ ಆವರಣದಲ್ಲಿ ಚಿರತೆ ಮರಿ ಓಡಾಡಿದ್ದನ್ನು ಪೊಲೀಸರು ಕಂಡಿದ್ದರು. ಜನರನ್ನ ಕಂಡ ಚಿರತೆ ಭಯದಿಂದ ಪೊಲೀಸ್ ಠಾಣೆಯ ಆವರಣದಲ್ಲೇ ಇದ್ದ ಹಳೆಯ ಕಾರಿನಲ್ಲಿ ಹತ್ತಿ ಅವಿತುಕೊಂಡಿತ್ತು.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಆಗಮಿಸಿದ್ದು, ಗುಡಿಬಂಡೆ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಬಲೆ ಹಾಕಿ ಚಿರತೆ ಮರಿಯ ಸೆರೆಗೆ ಯತ್ನ ನಡೆಯುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


