ಕೊರಟಗೆರೆ: ನಾಯಿ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ, ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಪಟ್ಟಣದ 4ನೇ ವಾರ್ಡ್, ಕಾವಲುಬೀಳು ಗ್ರಾಮದ ನಿವಾಸಿ ರಮೇಶ್ ಎಂಬುವರ ಸಾಕುನಾಯಿ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿತ್ತು, ಇದರಿಂದ ಸಾರ್ವಜನಿಕರು ಭಯಬೀತರಾಗಿದ್ದರು, ತಕ್ಷಣ ಅರಣ್ಯ ಇಲಾಖೆ ಸೂಕ್ತಕ್ರಮವಹಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 2 ವರ್ಷದ ಚಿರತೆ ಮರಿ ಬೋನಿಗೆ ಬಿದ್ದು ಘರ್ಜಿಸುತ್ತಿದ್ದು, ಪಟ್ಟಣದ ಜನತೆ ಚಿರತೆ ನೋಡಲು ದೌಡಾಯಿಸಿ ಮುಗಿಬಿದ್ದದ್ದು ಕಂಡು ಬಂದಿತು. ಹಿರೇಬೆಟ್ಟ ರಕ್ಷಿತ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಉಪಟಳ ಹೆಚ್ಚುಗುತ್ತಿರುವುದರ ಬಗ್ಗೆ ಗಮನಹರಿಸಿದ ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ವಿಷಯ ತಿಳಿದ ತಕ್ಷಣ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿಗಳ ಸ್ಥಳಕ್ಕೆ ಬಂದು ಚಿರತೆ ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


