nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸಬೇಕಿದೆ: ಪ್ರೊ.ಎ.ಎಚ್‌.ರಾಜಾಸಾಬ್‌

    November 16, 2025

    ಹಣಕ್ಕಾಗಿ ಹೋಟೆಲ್ ಮಾಲೀಕರಿಗೆ ಬ್ಲ್ಯಾಕ್‌ ಮೇಲ್:  ಯೂಟ್ಯೂಬ್ ವಾಹಿನಿಯ ಇಬ್ಬರು ಪತ್ರಕರ್ತರ ಬಂಧನ

    November 16, 2025

    ಇಂದಿನಿಂದ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ

    November 16, 2025
    Facebook Twitter Instagram
    ಟ್ರೆಂಡಿಂಗ್
    • ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸಬೇಕಿದೆ: ಪ್ರೊ.ಎ.ಎಚ್‌.ರಾಜಾಸಾಬ್‌
    • ಹಣಕ್ಕಾಗಿ ಹೋಟೆಲ್ ಮಾಲೀಕರಿಗೆ ಬ್ಲ್ಯಾಕ್‌ ಮೇಲ್:  ಯೂಟ್ಯೂಬ್ ವಾಹಿನಿಯ ಇಬ್ಬರು ಪತ್ರಕರ್ತರ ಬಂಧನ
    • ಇಂದಿನಿಂದ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ
    • ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ
    • ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
    • ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ
    • ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ
    • ನವೆಂಬರ್ 19:  ಚಿಕ್ಕಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಸಂಘಟಿತ ಕಾರ್ಮಿಕರ ಪಟ್ಟಿ : ಹೊಸದಾಗಿ 65 ವರ್ಗಗಳ ಸೇರ್ಪಡೆ
    ತುಮಕೂರು April 4, 2025

    ಅಸಂಘಟಿತ ಕಾರ್ಮಿಕರ ಪಟ್ಟಿ : ಹೊಸದಾಗಿ 65 ವರ್ಗಗಳ ಸೇರ್ಪಡೆ

    By adminApril 4, 2025No Comments3 Mins Read
    workers

    ತುಮಕೂರು: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಪ್ರಾರಂಭಿಕವಾಗಿ ನೋಂದಾಯಿಸಲಾಗುತ್ತಿದ್ದ 26 ಅಸಂಘಟಿತ ಕಾರ್ಮಿಕರ ಪಟ್ಟಿಗೆ ಹೊಸದಾಗಿ 65 ವರ್ಗಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದ್ದಾರೆ.

    ಈ ಹಿಂದೆ ಪ್ರಾರಂಭಿಕವಾಗಿ ಹಮಾಲ, ಟೈಲರ್, ಗೃಹ ಕಾರ್ಮಿಕ, ಅಗಸ, ಚಿಂದಿ ಆಯುವ, ಅಕ್ಕಸಾಲಿಗ, ಕಮ್ಮಾರ, ಕುಂಬಾರ, ಕ್ಷೌರಿಕ, ಭಟ್ಟಿಕಾರ್ಮಿಕ, ಸಿನಿ ಕಾರ್ಮಿಕ, ನೇಕಾರ, ಬೀದಿಬದಿ ವ್ಯಾಪಾರಿ, ಹೋಟೆಲ್ ಕಾರ್ಮಿಕ, ಫೋಟೋಗ್ರಾಫರ್, ಸ್ವತಂತ್ರ ಲೇಖನ ಬರಹಗಾರ, ಬೀಡಿ ಕಾರ್ಮಿಕ, ಅಸಂಘಟಿತ ವಿಕಲಚೇತನ ಕಾರ್ಮಿಕ, ಅಲೆಮಾರಿ ಪಂಗಡದ ಕಾರ್ಮಿಕ, ಹಗ್ಗ ಸಿದ್ದಪಡಿಸುವ (ಬೈಜಂತ್ರಿ) ಕಾರ್ಮಿಕ, ಉಪ್ಪನ್ನು ತಯಾರಿಸುವ ಉಪ್ಪಾರ, ಬಿದಿರು ವೃತ್ತಿಯಲ್ಲಿರುವ ಮೇದಾರ, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕ, ಕೇಬಲ್ ಕಾರ್ಮಿಕ, ಕಲ್ಯಾಣ ಮಂಟಪ/ ಸಭಾ ಭವನ/ ಟೆಂಟ್/ ಪೆಂಡಾಲ್ಗಳ ಕಾರ್ಮಿಕ, ಗಾದಿ/ ಹಾಸಿಗೆ/ ದಿಂಬು ತಯಾರಿಕಾ ಕಾರ್ಮಿಕ(ಪಿಂಜಾರರು/ ನದಾಫರು)ರು ಸೇರಿ 26 ಅಸಂಘಟಿತ ಕಾರ್ಮಿಕರನ್ನಾಗಿ ನೋಂದಾಯಿಸಲಾಗುತ್ತಿತ್ತು. ಇದರೊಂದಿಗೆ ಪ್ರಸ್ತುತ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, ಮತ್ತು 3ಬಿ ವರ್ಗಕ್ಕೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ 91 ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ಗಳನ್ನು ನೀಡಲಾಗುತ್ತಿದೆ.


    Provided by
    Provided by

    ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ವರ್ಗಕ್ಕೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ಬಡಗಿ /ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ಗೆ ಹಾಗೂ ಕಂಬಳಿ ತಯಾರಿಕೆ, ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ, ಪೊರಕೆಕಡ್ಡಿ ತಯಾರಿಕೆ, ಸುಣ್ಣ ಸುಡುವುದು, ವಾಲಗ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ(ಗೌಳಿ ವೃತ್ತಿ), ಬಳೆ ವ್ಯಾಪಾರ/ಮೇಣದ ಬತ್ತಿ ತಯಾರಿಕೆ, ಕಂಚು ಕೆಲಸ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ(ರಟ್ಟನ್) ಆಟಿಕೆ/ ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ/ಕಲ್ಲು ಕೆತ್ತನೆ ಕೆಲಸ, ಮೀನುಗಾರಿಕೆ, ನಾಟಿ ಔಷಧಿ ತಯಾರಿಕೆ, ಬಣ್ಣ ಶೃಂಗಾರ(ಬ್ಯೂಟಿ ಪಾರ್ಲರ್)ಮಾಡುವ ವೃತ್ತಿ, ಶೀಟ್ ಮೆಟಲ್ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆ ಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ/ರಥ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ, ಮೆಟಲ್ ಕ್ರಾಫ್ಟ್, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಗಾಣದ ಕೆಲಸ, ಮೆಷಿನರಿ ಕೆಲಸ, ಹೂವು ಕಟ್ಟುವ ವೃತ್ತಿ, ಹೊಸೈರಿ ವಸ್ತುಗಳ ತಯಾರಿಕೆ, ಪಾತ್ರೆಗಳಿಗೆ ಕಲಾಯಿ ಹಾಕುವುದು, ವಾದ್ಯ ವೃಂದ ವೃತ್ತಿ, ವೆಲ್ಡಿಂಗ್ ಕೆಲಸ, ಕುರಿ ಸಾಕಾಣಿಕೆ ವರ್ಗದೊಂದಿಗೆ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡದ ಕುಲ ಕಸುಬಿನಲ್ಲಿ ತೊಡಗಿರುವ ಧಾರ್ಮಿಕ ಭಿಕ್ಷಕ ವೃತ್ತಿ, ಭವಿಷ್ಯ ನುಡಿಯುವುದು/ ಲಾವಣಿ ಪದಗಳನ್ನು ಹಾಡುವುದು/ ಹವಾಮಾನ ಪ್ರವಾದಿ, ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ/ ಗುಂಡು ಎಸೆಯುವುದು/ ಲಾಗ ಹಾಕುವುದು/ ಎತ್ತಿನ ಬಂಡಿ ತಿರುಗಿಸುವುದು/ ಇತರೆ ಕಸರತ್ತುಗಳ ವೃತ್ತಿ, ದೇವಸ್ಥಾನಗಳಲ್ಲಿ ನರ್ತಿಸುವುದು/ ಭಿಕ್ಷಾಟನೆ/ ಅಂಭಾದೇವಿಯ ಆರಾಧಕರು/ ಗೋಂಧಳಿ ನೃತ್ಯ ಮಾಡುವುದು/ ಜ್ಯೋತಿಷ್ಯಗಿಣಿ ಶಾಸ್ತç/ ಹಸ್ತ ಮುದ್ರಿಕೆ ಶಾಸ್ತç/ ಬುಡಬುಡಕಿ ಭವಿಷ್ಯ/ ಕಣಿ ಹೇಳುವುದು, ದೇವರ ಕಥೆ ಹಾಗೂ ಪುರಾಣದ ಕಥೆ ಹೇಳುವ/ ಬೊಂಬೆ ಪ್ರದರ್ಶನ, ಮದುವೆ ಮತ್ತು ಹಬ್ಬದ ದಿನಗಳಂದು ಡೋಲು ಬಡಿದು ಹಾಡು ಹೇಳುವುದು, ಅರಿಶಿಣ-ಕುಂಕುಮ ಮಾರಾಟ/ ಮಸಾಲೆ ದಿನಸಿ ಮಾರಾಟ, ದೊಂಬರಾಟ/ ವಿದೂಷಕ, ಮೋಡಿಗಾರರು/ಕಣ್ಣುಕಟ್ಟು ವಿದ್ಯೆ, ಗೊಂದಲು ಹಾಕುವುದು(ಪೂಜಾ ವಿಧಾನ), ಗ್ರಾಮ ಚರಿತ್ರೆಗಳ ಪಾರುಪತ್ತೆಗಾರರು, ತಂಬೂರು ಮತ್ತು ಹಾರ್ಮೋನಿಯಂ ಸಹಾಯದಿಂದ ಪದಗಳನ್ನು ಕಟ್ಟಿ ಹಾಡುವುದು, ಬೊಂಬೆ-ಹೊದಿಕೆ-ಬಾಚಣಿಕೆ ತಯಾರಿಕೆ/ ಹಚ್ಚೆ ಹಾಕುವುದು, ಎತ್ತನ್ನು ಹಿಡಿದುಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಹಠಯೋಗ/ ಧರ್ಮ ಪ್ರಚಾರ/ ಕಾಲಭೈರವನ ಆರಾಧನೆ, ಕತ್ತಿ ತಯಾರಿಕೆ, ಔಷಧಿ ಮಾರಾಟಗಾರರು/ ಭಿಕಾರಿ ವೈದ್ಯ ವೃತ್ತಿ, ಗಾರುಡಿಗರು/ ಬೀಸುವ ಕಲ್ಲು ಮತ್ತು ವೀಸಣಿಕೆ ಮಾರಾಟ/ ಮರದ ಸೌಟುಗಳ ತಯಾರಿಕೆ, ಸೂಜಿ-ದಾರ-ಒಳಕಲ್ಲು ಮಾರಾಟ, ಡ್ರಂ ಬಾರಿಸುವುದು/ ಕೊಳಲು ನುಡಿಸುವುದು, ಕಬ್ಬಿಣ-ತಾಮ್ರದ ತಂತಿಗಳನ್ನು ಉಪಯೋಗಿಸಿ ವಿಧವಿಧವಾದ ಬಳೆ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ತೊಗಲು ಬೊಂಬೆ ಆಡಿಸುವುದು, ಮರಗವನ ಆಡಿಸುವುದು, ಊರೂರು ಅಲೆದು ಬಯಲಾಟಗಳ ಪ್ರದರ್ಶನ, ತಾಮ್ರ-ಬೆಳ್ಳಿ-ಕಲ್ಲು-ಹಿತ್ತಾಳೆಗಳಿಂದ ಆಭರಣ ತಯಾರಿಸಿ ಮಾರಾಟ ಮಾಡುವುದು, ಅಲೆಮಾರಿ ಪಶುಪಾಲಕರು, ಕೋಳಿಮೊಟ್ಟೆ, ಮೀನು ಮಾರಾಟ ಮಾಡುವ ಕಾರ್ಮಿಕರು ಸೇರಿದಂತೆ ಒಟ್ಟು 65 ವರ್ಗಗಳನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಲಾಗಿದೆ.

    ನೋಂದಣಿಯಾದ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ ಸೌಲಭ್ಯ, ಸಹಜ ಮರಣ ಪರಿಹಾರ ಹಾಗೂ ಅಂತ್ಯಕ್ರಿಯೆ ವೆಚ್ಚಗಳ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯಿಂದ ನೀಡಲಾಗುವುದು.

    ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ 1 ಲಕ್ಷ ರೂ.ಗಳ ಪರಿಹಾರ, ಅಪಘಾತದಿಂದ ಸಂಪೂರ್ಣ/ ಭಾಗಶಃದುರ್ಬಲತೆ ಹೊಂದಿದಲ್ಲಿ 1 ಲಕ್ಷ ರೂ.ಗಳ ಪರಿಹಾರ ಹಾಗೂ ಆಸ್ಪತ್ರೆ ವೆಚ್ಚ(ಅಪಘಾತ ಪ್ರಕರಣಗಳಲ್ಲಿ ಮಾತ್ರ) ಮರು ಪಾವತಿಯಾಗಿ 50,000 ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುವುದು.

    ನೋಂದಾಯಿತ ಫಲಾನುಭವಿಯು ವಯೋಸಹಜ ಖಾಯಿಲೆ/ ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ 10,000 ರೂ.ಗಳ ಧನಸಹಾಯ ಸೌಲಭ್ಯ ಕಲ್ಪಿಸಲಾಗುವುದು.

    ಅಸಂಘಟಿತ ಕಾರ್ಮಿಕರಾಗಿ ಕರ್ನಾಟಕ ರಾಜ್ಯದ ನಿವಾಸಿಗಳು ಮಾತ್ರ ನೋಂದಣಿಯಾಗಲು ಅರ್ಹರಿರುತ್ತಾರೆ. ನೋಂದಣಿಗಾಗಿ 18 ರಿಂದ 60 ವಯೋಮಾನದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಪಿ.ಎಫ್. ಹಾಗೂ ಇ.ಎಸ್.ಐ ಸೌಲಭ್ಯ ಹೊಂದಿರಬಾರದು.

    ಅಸಂಘಟಿತ ಕಾರ್ಮಿಕರಾಗಿ ನೋಂದಣಿಯಾಗಲು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್ ಸಂಖ್ಯೆ, ಪಡಿತರ ಚೀಟಿ(ಲಭ್ಯವಿದ್ದಲ್ಲಿ), ಬ್ಯಾಂಕ್ ಪಾಸ್ ಪುಸ್ತಕ ಸೇರಿದಂತೆ ಮತ್ತಿತರ ದಾಖಲೆಗಳು ಅವಶ್ಯಕವಾಗಿರುತ್ತವೆ.
    ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು/ಕಾರ್ಮಿಕ ನಿರೀಕ್ಷಕರ ಕಚೇರಿ, ತುಮಕೂರು ಉಪ ವಿಭಾಗ, ತುಮಕೂರು ಇವರನ್ನು ಸಂಪರ್ಕಿಸಿ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

     

    admin
    • Website

    Related Posts

    ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸಬೇಕಿದೆ: ಪ್ರೊ.ಎ.ಎಚ್‌.ರಾಜಾಸಾಬ್‌

    November 16, 2025

    ನವೆಂಬರ್ 19:  ಚಿಕ್ಕಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ

    November 15, 2025

    ತುಮಕೂರು: ನಗರದ ವಿವಿಧೆಡೆ ಉಪಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅಧಿಕಾರಿಗಳು, ಅಂಗಡಿ ಮಾಲಿಕರಿಗೆ ತರಾಟೆ

    November 15, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸಬೇಕಿದೆ: ಪ್ರೊ.ಎ.ಎಚ್‌.ರಾಜಾಸಾಬ್‌

    November 16, 2025

    ತುಮಕೂರು: ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ…

    ಹಣಕ್ಕಾಗಿ ಹೋಟೆಲ್ ಮಾಲೀಕರಿಗೆ ಬ್ಲ್ಯಾಕ್‌ ಮೇಲ್:  ಯೂಟ್ಯೂಬ್ ವಾಹಿನಿಯ ಇಬ್ಬರು ಪತ್ರಕರ್ತರ ಬಂಧನ

    November 16, 2025

    ಇಂದಿನಿಂದ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ

    November 16, 2025

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.