ಚಿಕ್ಕನಾಯಕನಹಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ಧರ್ಮಕ್ಕೆ ಬಹಳಷ್ಟು ಮಹತ್ವ ಇದೆ. ಧರ್ಮದ ಆದರ್ಶ ಮೌಲ್ಯಗಳು ಜೀವನದ ಶ್ರೇಯಸ್ಸಿಗೆ ಮೂಲ ಶ್ರೀ ಗುರುವಿನ ಕಾರುಣ್ಯದಿಂದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಕುಪ್ಪೂರು ಗದ್ದಿಗೆ ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹಗಲು ಹೊತ್ತಿನಲ್ಲಿ ಸೂರ್ಯ ನಮಗೆ ಬೆಳಕನ್ನು ಕೊಡುತ್ತಾನೆ, ರಾತ್ರಿ ಹೊತ್ತಿನಲ್ಲಿ ಚಂದ್ರ ನಮಗೆ ಬೆಳದಿಂಗಳನ್ನು ಕೊಡುತ್ತಾನೆ. ಆದರೆ ಸರ್ವಕಾಲದಲ್ಲಿ ಸರ್ವರಿಗೂ ಧರ್ಮ ಬಾಳಿಗೆ ಬೆಳಕನ್ನು ತೋರುತ್ತದೆ ವೀರಶೈವ ಧರ್ಮ. ಅತ್ಯಂತ ಪ್ರಾಚೀನವಾದ ಧರ್ಮ ಇದರ ಇತಿಹಾಸ ಪರಂಪರೆ ಅಪೂರ್ವ ವಾದದ್ದು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕೊಟ್ಟ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ ಕುಪ್ಪೂರು ಗದ್ದಿಗೆ ಮಠ ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖ ಮಠ ವಾಗಿದ್ದು, ಈ ಭಾಗದಲ್ಲಿ ಗುರುಪೀಠ ಪರಂಪರೆಯನ್ನು ಎತ್ತಿ ಹಿಡಿದ ಶ್ರೀ ಮರುಳಸಿದ್ದೇಶ್ವರರ ಜಾಗೃತಸ್ಥಳ ಹಿಂದಿನ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತದನಂತರದಲ್ಲಿ ಬಂದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಅಭಿರುದ್ಧಿಗಾಗಿ ಸದಾ ಶ್ರಮಿಸಿದ್ದು ಮರೆಯಲಾಗದು ಎಂದರು.
ಯತೀಶ್ವರ ಶ್ರೀಗಳ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಪರಂಪರೆಯಂತೆ ಶ್ರೀ ತೇಜೇಶ ಎಂಬ ಒಟುವಿಗೆ ಧಾರ್ಮಿಕ ಸಂಸ್ಕಾರ ಷಟಸ್ಥಲ ಬ್ರಹ್ಮೋಪದೇಶ ಬೆಳಗಿನ ಪ್ರಾತಃಕಾಲದಲ್ಲಿ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರಿಂದ ವಿದ್ಯುಕ್ತವಾಗಿ ಗುರುತ್ವ ಅಧಿಕಾರ ಅನುಗ್ರಹಿಸಲಿದ್ದು ನಂತರ ದಂಡಕ ಮಂಡಲ ಮುದ್ರಾ ಸಮೇತ ನೂತನ ಶ್ರೀಗಳವರಿಗೆ ಹೊಸ ನಾಮಕರಣದೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸುವರು. ನಾಡಿನ ಎಲ್ಲ ಜನತೆ ಈ ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಕರೆ ಕೊಟ್ಟರು ಸಮಾರಂಭದ ನೇತೃತ್ವವನ್ನು ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯರು ವಹಿಸಿದ್ದರು ಸಮ್ಮುಖವನ್ನು ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯರನ್ನು ಮೊದಲಗೊಂಡು 15 ಜನ ಪಟ್ಟಾಧ್ಯಕ್ಷರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕ ಗದಗಯ್ಯ ಹಿರೇಮಠ್ ವೇದಘೋಷ ವಿಠಲಾಪುರ ಗಂಗಾಧರ ಹಿರೇಮಠ್ ಇವರಿಂದ ಪ್ರಾರ್ಥನಾ ಗೀತೆ ಜರುಗಿತು ಆಡಳಿತ ಅಧಿಕಾರಿಗಳಾದ ವಾಗೀಶ್ ಪಂಡಿತಾರಾಧ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು ಹರಿಸಮುದ್ರದ ಗಂಗಾಧರ್ ಅವರು ಸರ್ವರನ್ನು ಸ್ವಾಗತಿಸಿದರು ಶ್ರೀ ಷಡಕ್ಷರ ಶಾಸ್ತ್ರಿಗಳು ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q