ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಿಂದ ಪುದುಚೇರಿಗೆ ಹೊರಟಿದ್ದ ಮೆಮು ಪ್ಯಾಸೆಂಜರ್ ರೈಲು ಹಳಿ ತಪ್ಪಿದ ಘಟನೆ ನಡೆದಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಇಂದು ಬೆಳಿಗ್ಗೆ 5.25ರ ಸುಮಾರಿಗೆ ವಿಲ್ಲುಪುರಂ-ಪುದುಚೇರಿ ಮೆಮು ಪ್ಯಾಸೆಂಜರ್ ರೈಲು ಸುಮಾರು 500 ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ನಿಲ್ದಾಣದಿಂದ ಹೊರಟ ಕೆಲ ಸಮಯದ ನಂತರ ವಕ್ರರೇಖೆ ದಾಟುತ್ತಿದ್ದ ಸಂದರ್ಭ ರೈಲಿನ ಒಂದು ಭೋಗಿ ಹಳಿತಪ್ಪಿದೆ. ಇದನ್ನು ಗಮನಿಸಿದ ಲೊಕೊ ಪೈಲಟ್ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಹೀಗಾಗಿ ಅನಾಹುತ ತಪ್ಪಿದೆ.
ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಗೆ ಕಾರಣ ಏನೆಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿದು ಬರಬೇಕಿದೆ. ರೈಲು ಹಳಿ ತಪ್ಪಿದ ಕಾರಣ ವಿಲ್ಲುಪುರಂ ಮಾರ್ಗದಲ್ಲಿ ಬೆಳಿಗ್ಗೆ 8.30ರವರೆಗೆ ರೈಲು ಸಂಚಾರ ಸ್ಥಗಿತಗೊಂಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx