ದಾಸರಹಳ್ಳಿ ಜಂಕ್ಷನ್ ನಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಸವಾರ ಎಚ್. ಎಸ್. ನಾಗಭೂಷಣ್ (32) ಅವರು ಮೃತಪಟ್ಟಿದ್ದಾರೆ.
‘ಮಧುಗಿರಿ ತಾಲ್ಲೂಕಿನ ನಾಗಭೂಷಣ್ ಅವರು ಆರ್. ಎಂ. ಸಿ ಯಾರ್ಡ್ ಬಳಿಯ ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯಶವಂತಪುರದ ಕೊಠಡಿಯೊಂದರಲ್ಲಿ ವಾಸವಿದ್ದರು’ ಎಂದು ಪೀಣ್ಯ ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


