ಮಧುಗಿರಿ: 15 ವರ್ಷಗಳ ನಂತರ ತುಂಬಿದ ಕೆರೆಯ ತೂಬಿನ ಸಮೀಪ ಬಿರುಕು ಬಿಟ್ಟಿದ್ದು ಸಮೀಪದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ದೊಡ್ಡೇರಿ ಹೋಬಳಿಯ ಬಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆರೆಯು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಶನಿವಾರ ರಾತ್ರಿ ಕೆರೆ ಕೋಡಿ ಹರಿದಿದೆ. ಆದರೆ ಕೆರೆಯ ಸುತ್ತ ಮುತ್ತ ಸುಮಾರು 400 ಎಕರೆಯಷ್ಟು ಜಮೀನು ಇದ್ದು, ಕೆರೆ ಒಡೆದರೆ, ಈ ಜಮೀನುಗಳ ಪರಿಸ್ಥಿತಿ ಏನು ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಗ್ರಾ.ಪಂ. ವತಿಯಿಂದ ಗ್ರಾಮಸ್ಥರ ಮನವಿ ಮೇರೆಗೆ ಬಡವನಹಳ್ಳಿ ಗ್ರಾಪಂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಮುಂದೆ ಆಗಬಹುದಾದ ಅನಾಹುತಕ್ಕೆ ಸ್ವಲ್ಪ ಕಡಿವಾಣ ಹಾಕಿದ್ದಾರೆ. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ.
ಕೋಡಿಯ ಸಮೀಪ ಈ ಘಟನೆ ಸಂಭವಿಸಿದ್ದು, ಗ್ರಾ.ಪಂ. ರವರು ಸದ್ಯಕ್ಕೆ 50 ಕ್ಕೂ ಹೆಚ್ಚು ಮರಳು ಚೀಲಗಳನ್ನು ಹಾಕಿ ಭದ್ರಪಡಿಸಲು ಮುಂದಾಗಿದ್ದಾರೆ. ಆದರೆ, ಇದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿದೆ. ಈ ಕೆರೆ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿದ್ದು, ಹೀಗಾಗಿ ಕೆರೆ ಸರಿಪಡಿಸಲು ಗ್ರಾ.ಪಂ. ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಮಾತನಾಡಿ, ನಾಗೇನಹಳ್ಳಿಯ ಗ್ರಾಮಸ್ಥರು ಕೆರೆ ಸರಿಪಡಿಸಿಕೊಡುವಂತೆ ತಿಳಿಸಿದ್ದರು. ಅದರಂತೆ ನಮ್ಮ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಟ್ರ್ಯಾಕ್ಟರ್ ಮೂಲಕ ಮರಳು ತುಂಬಿಕೊಂಡು ಕೆರೆಗೆ ಚೀಲಗಳನ್ನು ಹಾಕಿದ್ದಾರೆ ಅದರೂ ಸಣ್ಣ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು ಸಂಪೂರ್ಣವಾಗಿ ನೀರು ನಿಂತಿಲ್ಲ ಯಾರೂ ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700