ತಿಪಟೂರು: ಉದ್ಯೋಗ ಖಾತ್ರಿ ನಂಬಿ ಬೀದಿಗೆ ಬಿದ್ದ ಜನರು ಎಂಬ ಅಡಿಬರಹದಲ್ಲಿ ಮೂಡಿ ಬಂದ ವರದಿಗೆ ಎಚ್ಚೆತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ವಿದ್ಯಾಕುಮಾರಿ ಹಾಗೂ ತಾ.ಪಂ ಇ.ಓ ಸುದರ್ಶನ್ ಇಂದು ಬೆಳಗ್ಗೆ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಗುಡಿಗೊಂಡನಹಳ್ಳಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಸ್ಥಳದಲ್ಲಿದ್ದ ಜನರು ಈ ಬಗ್ಗೆ ಏನು ಕ್ರಮಕೈಗೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೇ ನೀಡದೇ ನಾಗತೀಹಳ್ಳಿಯ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿ ಬರುತ್ತೇನೆಂದು ಹೋಗಿ ಮತ್ತೆ ವಾಪಸ್ ಬಂದಿಲ್ಲ ಜನರು ಆರೋಪಿಸಿದ್ದಾರೆ.
ಗುಡಿಗೊಂಡನಹಳ್ಳಿ ಪಂಚಯಿತಿಯಲ್ಲಿ ನಕಲಿ ಎನ್.ಎಂ.ಆರ್. ಸೃಷ್ಠಿಸಿ ಫಲಾನುಭವಿಗಳಿಗೆ ವಂಚನೆ ಹಾಗೂ ಲಂಚಕೊಟ್ಟರೆ ತಕ್ಷಣ ಬಿಲ್, ಇಲ್ಲಿದಿದ್ದರೆ ಬಿಲ್ ಆಗೋದೇ ಇಲ್ಲ ಎಂದು ಗ್ರಾಮ ಪಂಚಾಯಿತಿ ಅವ್ಯವಹಾರದ ಬಗ್ಗೆ ಪ್ರಜಾಪ್ರಗತಿ ಎಂಬ ಪತ್ರಿಕೆ ವರದಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಜಿ.ಪಂ ಸಿ.ಇ.ಓ ಹಾಗೂ ತಾಲ್ಲೂಕು ಪಂಚಾಯತಿ ಇ.ಓ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ದಾಖಲೆಗಳನ್ನು ಒದಗಿಸಲಾಗದೆ ಪರದಾಡಿದರು. ಈ ಸಂದರ್ಭದಲ್ಲಿ ಸಿ.ಇ.ಓ ಅವರು ಸಿ.ಸಿ.ಟಿವಿ ಪರೀಕ್ಷಿಸಲು ಮುಂದಾದಾಗ ಸಿ.ಸಿ.ಟಿ.ವಿ ಕಾಣದ ಹಾಗೆ ಡಬ್ಬಗಳನ್ನು ಅಡ್ಡ ಇಟ್ಟಿರುವುದು ಕಂಡು ಬಂದಿದೆ ಎನ್ನಲಾಗಿದೆ.
ವರದಿ: ಮಂಜು ಗುರುಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700