ತೀವ್ರ ಕುಡಿತದ ಚಟ ಹೊಂದಿದ್ದ ವ್ಯಕ್ತಿಗೆ ಮಗಳ ಮದುವೆಯಂದು ಕುಡಿಯಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಲಕ್ನೋದ ಮೋಹನ್‌ಲಾಲ್ ಗಂಜ್ ಪ್ರದೇಶದಲ್ಲಿ ನಡೆದಿದೆ
ಮಗಳ ಮದುವೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಜೆ ದಿಬ್ಬಣ ಬರಲಿದೆ ಎನ್ನುವ ಸಮಯದಲ್ಲಿ ವಧುವಿನ ತಂದೆ 55 ವರ್ಷದ ಸುನೀಲ್ ದ್ವಿವೇದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುನೀಲ್ ದ್ವಿವೇದಿ ಸ್ಥಳೀಯ ಮೋಹನ್‌ಲಾಲ್ ಗಂಜ್ ಪ್ರದೇಶದ ತಿಕ್ರಾ ಗ್ರಾಮದ ನಿವಾಸಿ. ಕಂಠಪೂರ್ತಿ ಕುಡಿದುಕೊಂಡೇ ಇರುತ್ತಿದ್ದರು.ಮಗಳ ಮದುವೆ ಭಾನುವಾರ ನಿಶ್ಚಯವಾಗಿತ್ತು. ಶನಿವಾರ ಸಂಜೆ ಕೂಡ ಸುನಿಲ್ ಕುಡಿತದ ಅಮಲಿನಲ್ಲಿ ಮನೆಗೆ ಬಂದಿದ್ದರು. ಇದನ್ನು ನೋಡಿದ ಕುಟುಂಬಸ್ಥರು ಮಗಳ ಮದುವೆಗೆ ಅಡ್ಡಿಪಡಿಸಬೇಡಿ ಎಂದು ಹೇಳಿದ್ದಾರೆ. ಸಂಬಂಧಿಕರು ಭಾನುವಾರ ಮದ್ಯ ಸೇವನೆ ಮಾಡಬೇಡಿ ಎಂದು ಹೇಳಿದ್ದರು.
ಭಾನುವಾರ ಮುಂಜಾನೆ ಮದುವೆಯ ತಯಾರಿ ಆರಂಭ ಮಾಡಿದ್ದರು. ಎಲ್ಲಿಯೂ ಸುನೀಲ್ ಸುಳಿವು ಇದ್ದಿರಲಿಲ್ಲ. ಅವರಿಗಾಗಿ ಮನೆಯಲ್ಲಿ ಶೋಧ ಕಾರ್ಯ ಮಾಡಿದ್ದಾರೆ. ಈ ವೇಳೆ ಮನೆಯ ಹಿಂಬದಿಯಲ್ಲಿ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುನೀಲ್ ಶವ ಪತ್ತೆಯಾಗಿದೆ. ಆತನನ್ನು ಕುಣಿಕೆಯಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಸುನೀಲ್ ದ್ವಿವೇದಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy