ಬೆಂಗಳೂರು: ಕಳೆದ ಸರಿಗಮಪ ವೇದಿಕೆಯಲ್ಲಿ ಮಹಾಗುರು ಹಂಸಲೇಖ ಅವರು ಯಾಕೆ ಕಾಣಿಸಿಕೊಂಡಿರಲಿಲ್ಲ ಎಂಬ ಅನುಮಾನಗಳಿಗೆ ಇದೀಗ ಉತ್ತರ ದೊರೆತಿದ್ದು, ಈ ಬಗ್ಗೆ ಝೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಸ್ಪಷ್ಟನೆ ನೀಡಿದ್ದಾರೆ.
ಅಸ್ಪೃಶ್ಯತೆ ಹಾಗೂ ಬೂಟಾಟಿಕೆಯ ದಲಿತ ಕೇರಿಗೆ ಭೇಟಿಯ ಬಗ್ಗೆ ಮಾತನಾಡಿದ್ದಕ್ಕೆ ಹಂಸಲೇಖ ಅವರನ್ನು ಕಾರ್ಯಕ್ರಮದಿಂದ ತೆಗೆಯಲಾಗಿದೆ ಎಂದು ವದಂತಿಗಳು ಹಬ್ಬಿದ್ದವು. ಕೆಲವು ಸುದ್ದಿ ವಾಹಿನಿಗಳ ಅಂತರ್ಜಾಲ ಮಾಧ್ಯಮಗಳಲ್ಲಿ ಈ ರೀತಿಯ ಸುಳ್ಳು ಸುದ್ದಿ ಕೂಡ ಹಬ್ಬಿತ್ತು. ಆದರೆ ವಾಸ್ತವವಾಗಿ, ಹಂಸಲೇಖ ಅವರೇ ಕಾರ್ಯಕ್ರಮದಿಂದ ಒಂದು ದಿನದ ಮಟ್ಟಿಗೆ ಹೊರಗುಳಿಯಲು ತೀರ್ಮಾನಿಸಿದ್ದರಂತೆ.
ಈ ಬಗ್ಗೆ ಬರೆದುಕೊಂಡಿರುವ ರಾಘವೇಂದ್ರ ಹುಣಸೂರು, ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ ಎಂದು ತಿಳಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700