ತುಮಕೂರು: ಜಿಲ್ಲೆಯ ಹೆಸರಾಂತ ಮಹೇಶ್ ಪಿ.ಯು. ಕಾಲೇಜಿನ ಉಪನ್ಯಾಸಕ ಹರೀಶ್ ರವರು ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು.
ತುರುವೇಕೆರೆ ಪಟ್ಟಣದ ಜೆ.ಪಿ.ಆಂಗ್ಲ ಪ್ರೌಢಶಾಲೆ, ಮಾದಿಹಳ್ಳಿ ಗ್ರಾಮದ ರಾಮಕೃಷ್ಣ ಮಠದ ಬದರಿಕಾಶ್ರಮ ಮಾಯಸಂದ್ರ ಗ್ರಾಮದ ನೆಹರು ಬಾಲಿಕಾ ವಿದ್ಯಾಶಾಲೆಗಳಿಗೆ ಭೇಟಿ ನೀಡಿದ ಉಪನ್ಯಾಸಕರಾದ ಹರೀಶ್ ರವರು ವಿದ್ಯಾರ್ಥಿಗಳೊಂದಿಗೆ ಕಾಲೇಜು ಶಿಕ್ಷಣ ಕುರಿತು ಸಂವಾದ ನಡೆಸಿದರು.
ಇದೇ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ಶಿಕ್ಷಣ ಕುರಿತು ವಿದ್ಯಾರ್ಥಿಗಳ ಪಾತ್ರ ಮತ್ತು ಪೋಷಕರ ಪಾತ್ರದ ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ವಿನಿಮಯ ಮಾಡಿಕೊಂಡರು.
ಮಹೇಶ್ ಪಿ.ಯು.ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ಸಾಲಿನಲ್ಲಿ ಹಾಗೂ ಇನ್ನು ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲೇ ಉತ್ತಮ ಪ್ರಗತಿ ಸಾಧಿಸಿದ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು 2ರಿಂದ 3 ಶಾಖೆಗಳು ಇದೆ ಎಂದು ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. ಆದರೆ ನಮ್ಮ ಸಂಸ್ಥೆ ತುಮಕೂರು ಜಿಲ್ಲೆಯಲ್ಲಿ ಒಂದು ಮಾತ್ರವೇ ಇದೆ. ನಮ್ಮ ಶಾಖೆಗೆ ಸಂಬಂಧಿಸಿದ ಸಂಸ್ಥೆಯ ಬಗ್ಗೆ ಅಂತರ್ಜಾಲದಲ್ಲಿ ಪರಿಶೀಲಿಸಬಹುದಾಗಿದೆ ಎಂದು ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಜೆ.ಪಿ.ಆಂಗ್ಲ ಶಾಲೆಯ ಮುಖ್ಯ ಶಿಕ್ಷಕರಾದ ತುಕಾರಾಂ, ನೆಹರು ವಿದ್ಯಾ ಬಾಲಿಕಾ ಪ್ರೌಢಶಾಲೆಯ, ಮುಖ್ಯೋಪಾಧ್ಯಾಯರಾದ ಕುಮಾರ್ ಸ್ವಾಮಿ ಮತ್ತು ಭದರಿಕಾಶ್ರಮ ವಿದ್ಯಾ ಶಾಲೆಯ ಶಿಕ್ಷಕರಾದ ರವಿ ಸೇರಿದಂತೆ ಶಾಲಾ ಆಡಳಿತದ ಮಂಡಳಿ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ಸುರೇಶ್ ಬಾಬು. ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy