ತಾಲೂಕಿನ ಮಾಯಸಂದ್ರ ಹೋಬಳಿ ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶಾಸಕ ಮಸಾಲ ಜೈರಾಮ್ , ಈ ಹಿಂದೆ 15 ವರ್ಷಗಳ ಕಾಲ ಶಾಸಕರಾಗಿದ್ದ ಮಹನೀಯರು ಯಾಕೆ ಈ ತಾಲೂಕಿನಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಈ ಭಾಗಕ್ಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಒಮ್ಮೆ ಮಧ್ಯರಾತ್ರಿ ಹೇಮಾವತಿ ನೀರಿಗಾಗಿ ನಮ್ಮ ತಾಲೂಕಿನ ಒಂದು ಗ್ರಾಮದಲ್ಲಿ ಗಲಾಟೆಯಾದಾಗ ರಾತ್ರಿ 2 ಗಂಟೆಯಾದರೂ ಕೂಡ ನಾನು ಆ ಸ್ಥಳಕ್ಕೆ ಭೇಟಿ ನೀಡಿ, ಆ ಜಗಳವನ್ನು ಬಿಡಿಸಿ ಈ ತಾಲೂಕಿಗೆ ನೀರನ್ನು ಹರಿಸಲು ಎಷ್ಟು ಹೋರಾಟ ಮಾಡಿದ್ದೇನೆ ಎಂಬುದು ನಮ್ಮ ಶ್ರಮ ನಿಮಗೆ ಗೊತ್ತಿಲ್ಲ ನೀವು ನೋಡಿದರೆ ನಮ್ಮ ಅವಧಿಯಲ್ಲಿ ಕೆಲಸ ಆಗಿದೆ ಎಂದು ಹೇಳುತ್ತಿದ್ದೀರಾ ನಮ್ಮ ತಾಲೂಕಿಗೆ ಹೇಮಾವತಿ ನಿರ್ವಹಿಸಲು ಮುಖ್ಯ ಕಾರಣ ಯಾರೆಂಬುದು ನಿಮಗೆ ಗೊತ್ತಿದೆಯೇ ? ಸುಮ್ಮನೆ ನಾವು ಮಾಡಿದ್ದು ನಾವು ಮಾಡಿದ್ದು ಎಂದು ಹೇಳುತ್ತೀರಾ ಇದಕ್ಕೆ ಕಾರಣರಾದವರು ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಎಂಬುದು ನಿಮಗೆ ತಿಳಿದಿದೆಯೇ ನಿಮಗೆ ನಾಲಿಗೆಗೂ ಮೆದುಳಿಗೂ ಲಿಂಕ್ ತಪ್ಪಿ ಹೋಗಿದೆ ಎಂದು ಮಾಜಿ ಶಾಸಕರ ವಿರುದ್ಧ ಕಿಡಿ ಕಾರಿದರು.
ಈ ಹಿಂದೆ ಇದ್ದಂತಹ ನಿಮ್ಮ ನಿಷ್ಠಾವಂತ ಕಾರ್ಯಕರ್ತರಾದ 39 ಜನರ ಮೇಲೆ ರೌಡಿಶೀಟರ್ ಮಾಡಿಸಿದ್ದೀರಾ ? ಇವೆಲ್ಲವೂ ನಿಮ್ಮ ಅಭಿವೃದ್ಧಿ ಕೆಲಸವೇ ? ಎಂದು ಗುಡುಗಿದರು.
ಇನ್ನು ಕಾರ್ಯಕರ್ತರಿಗೆ ಈ ಕಾರ್ಯಕ್ರಮವೇ ಚುನಾವಣಾ ಪ್ರಚಾರ ಎಂದು ತಿಳಿದುಕೊಂಡು ನೀವು ತಯಾರಾಗಿ ನೀವು ತಯಾರಾಗಿ ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಬೂತ್ ಮಟ್ಟದಲ್ಲಿ ಐವತ್ತಕ್ಕೂ ಹೆಚ್ಚು ಮತಗಳು ಬರುವಂತೆ ನೋಡಿಕೊಳ್ಳಿ ದೇಶದ ಪ್ರಧಾನಿ ಮೋದಿ ಅವರ ಕೃಪೆಯಿಂದ ನಾವು ನೀವು ನೆಮ್ಮದಿಯ ಜೀವನ ನಡೆಸುತ್ತಿದ್ದು ಇದರಲ್ಲಿ ಮೋದಿ ಅವರ ಪಾತ್ರ ಬಹಳ ದೊಡ್ಡದು ಕಾರ್ಯಕರ್ತರು ರೆಡಿ ಇರಿ ಎಂದು ಶಾಸಕರು ಕಾರ್ಯಕರ್ತರಿಗೆ ಕಾರ್ಯ ನೀಡಿದರು.
ಮುಂದುವರೆದು ಮಾತನಾಡಿ ತುರುವೇಕೆರೆ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಹೋಗಿ ನೋಡಿ ಮಾಜಿ ಶಾಸಕರೇ ನಾನು ಮಾಡಿರುವ ಅಭಿವೃದ್ಧಿಯ ಕಾರ್ಯಗಳು ತಕ್ಕ ಉತ್ತರ ನೀಡುತ್ತವೆ ನಮ್ಮ ತಾಲೂಕಿಗೆ ಅತಿ ಹೆಚ್ಚು ಅನುದಾನವನ್ನು ಒಳಕ್ಕೆ ಮಾಡಿರುತ್ತೇನೆ. ಇಡೀ ಕ್ಷೇತ್ರಕ್ಕೆ ಹಾಗೂ ತಾಲೂಕಿಗೆ ಸಾವಿರದ ಆರುನೂರು ಕೋಟಿ ಅನುದಾನವನ್ನ ತಂದು ಬಳಕೆ ಮಾಡಿ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದೇನೆ .
ಇನ್ನು ನೂರು ಕೋಟಿ ಅನುದಾನವನ್ನು ತಂದು ನಮ್ಮ ತಾಲೂಕಿನ ಅಭಿವೃದ್ಧಿಗಾಗಿಯೇ ಮೀಸಲಿಟ್ಟು ಕೆಲಸವನ್ನು ಕೂಡ ಆರಂಭ ಮಾಡುತ್ತೇನೆ. ಜೊತೆಗೆ ನಿಮ್ಮ ಅವಧಿಯಲ್ಲಿ ಮಾಡಿರುವ ಗಲೀಜನ್ನು ತೊಳೆಯಲು ಬಂದಿದ್ದೇನೆ ನಾನು ಇಲ್ಲಿಗೆ ರಾಜಕಾರಣಕ್ಕಾಗಿ ಬಂದವನಲ್ಲ ಹಾಗೂ ಹಣ ಮಾಡಲು ಬಂದವನಲ್ಲ ಇದರ ಅವಶ್ಯಕತೆಯೂ ಇಲ್ಲ ತಾಲೂಕಿಗೆ ಎರಡು ಸಾವಿರದ ಎಂಟುನೂರು ನ ಟಿ ಸಿ ಗಳು ಸುಮಾರು 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಿಸಿದ್ದೇನೆ.
ಇನ್ನೇನು ಕೆಲವೇ ದಿನಗಳಲ್ಲಿ ಟಿ ಸಿ ಗಳನ್ನು ರೈತರಿಗೆ ನೀಡಲಿದ್ದೇವೆ ನಮ್ಮ ತಾಲೂಕಿಗೆ ಅಭಿವೃದ್ಧಿ ಕೆಲಸ ಆಗಲು ನನ್ನ ಬೆನ್ನಿಗೆ ಬೆನ್ನೆಲುಬಾಗಿ ನಿಂತ ಮಾಜಿ ಉಸ್ತುವಾರಿ ಸಚಿವರಾದ ಮಾಧುಸ್ವಾಮಿಯವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು .
ಜೊತೆಗೆ ಇದೇ ತಿಂಗಳು 21 ನೇ ತಾರೀಕು ಬೆಳಗ್ಗೆ 11 ಗಂಟೆಗೆ ತಾಲೂಕಿಗೆ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು ಈ ಯಾತ್ರೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಹಾಗೂ ರಾಜ್ಯಮಟ್ಟದ ನಾಯಕರುಗಳು ಆಗಮಿಸುವರು ಹಾಗಾಗಿ ದಯಮಾಡಿ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಜಿ ಮುಖ್ಯಮಂತ್ರಿಗಳನ್ನು ತಾಲೋಕಿಗೆ ಸ್ವಾಗತಿಸಿ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಲಕ್ಷ್ಮಿ ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಣ್ಣ, ಕಡೆಹಳ್ಳಿ ಸಿದ್ದೇಗೌಡ, ಕೊಂಡಜ್ಜಿ ವಿಶ್ವನಾಥ್, ವಕೀಲ ಮುದ್ದೇಗೌಡ, ಗಿರೀಶ್ ,ಬ್ಯಾಟರಂಗೆ ಗೌಡ ,ಗಂಗಾಧರ್, ರಮೇಶ್ ,ಚಿಕ್ಕಯ್ಯ, ಗುತ್ತಿಗೆದಾರರಾದ ಗಂಗಾಧರ್ ,ತಿಮ್ಮರಾಜು ,ಎ ಪಿ ಎಂ ಸಿ ಮಾಜಿ ಸದಸ್ಯ ಕಾಂತರಾಜು, ಯಶೋದರ್ ,ರೆಹಮತ್ ,ಪ್ರಕಾಶ್ ಮತ್ತಿತರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA