ತಿಪಟೂರು: ಮಾಜಿ ಜಿಲ್ಲಾ ಪರಿಷತ್ ಸದಸ್ಯ ಎಚ್. ಗಂಗಾಧರ್ ಹಾಲ್ಕುರಿಕೆ ವಯೋ ಸಹಜದಿಂದ ಮರಣ ಹೊಂದಿದ್ದಾರೆ.
1984 ರಲ್ಲಿ ನಡೆದ ಹಾಲ್ಕುರಿಕೆ ಕ್ಷೇತ್ರದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್ ಪಿ ಗಂಗಾಧರಪ್ಪ ವಿರುದ್ಧ ಇವರು ಸ್ಪರ್ಧೆ ಮಾಡಿ ಜಿಲ್ಲಾ ಪರಿಷತ್ ಸದಸ್ಯತ್ವಕ್ಕೆ ಆಯ್ಕೆಯಾಗಿದ್ದರು.
ಒಮ್ಮೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಮುಜರಾಯಿ ಇಲಾಖೆಯ ಪಾರ್ತೆಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ 30 ವರ್ಷಗಳ ಕಾಲ ಕನ್ವಿಯಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತವಾಗಿ ಹೆಚ್ ಸಿಎಂಜಿ ಕಾಲೇಜಿನ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮತ್ತು ಸಾಧು ವೀರಶೈವ ಸಮಾಜ ಮುಖಂಡರಾಗಿದ್ದಾರೆ. ಇವರು ಇಬ್ಬರು ಗಂಡು ಮಕ್ಕಳು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy