ತುಮಕೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶನಿವಾರ ರೋಟರಿ ಬಿಲ್ವಪ್ರಿಯ ಬೆಳ್ಳಾವಿ ವತಿಯಿಂದ ಕ್ಯಾತ್ಸಂದ್ರದ 33ನೇ ವಾರ್ಡಿನ ಎಲ್ಲ ಪೌರಕಾರ್ಮಿಕರಿಗೆ, ಹೂ ಮಾರುವ ಮಹಿಳೆಯರಿಗೆ ಹಾಗೂ ಮನೆಕೆಲಸ ಮಾಡುವ ಹೆಂಗಸರಿಗೆ ಬ್ಲಾಂಕೆಟ್ ಗಳನ್ನು ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ರವಿ ಜಿ.ಆರ್. ಕ್ಯಾತ್ಸಂದ್ರದ ಮುಖಂಡರು ರೋಟರಿಯ ಬಗ್ಗೆ ಮಾತನಾಡಿ, ರೋಟರಿಯ ಸೇವೆ ಶ್ಲಾಘನೀಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಅಧ್ಯಕ್ಷ ಪ್ರಸಾದ್ ಕೆ.ಜೆ. ಸಹಿತ ರೋಟರಿ ಸದಸ್ಯರು ಭಾಗಿಯಾಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy