ಹಿರಿಯೂರು: ಮಾಜಿ ಸಚಿವ, ಮಾಜಿ ಶಾಸಕರಾದ ಡಿ.ಸುಧಾಕರ್ ಅವರು ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
2022ರ ಈ ಮಕರ ಸಂಕ್ರಾಂತಿ ಹಬ್ಬವು ನಮ್ಮ ಹಿರಿಯೂರು ತಾಲ್ಲೂಕಿನ ಜನತೆಗೂ ಹಾಗೂ ನಾಡಿನ ಜನತೆಯ ಬಾಳಲಿ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಹಾಗೂ ನಮ್ಮ ಹಿರಿಯೂರು ತಾಲ್ಲೂಕಿಗೆ ಇನ್ನು ಅತಿ ಹೆಚ್ಚು ಮಳೆ- ಬೆಳೆ ಆಗಿ ರೈತರ ಮುಖದಲ್ಲಿ ಎಂದೆಂದಿಗೂ ಸಂತೋಷ , ಮಂದಹಾಸ ತುಂಬಿರಲಿ ಎಂದು ಸುಧಾಕರ್ ಶುಭ ಹಾರೈಸಿದರು .
ಸಾಂಕ್ರಾಮಿಕ ರೋಗವಾದ ಒಮಿಕ್ರೋನ್ ರೋಗವು ಬಹಳ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ನ್ನು ಬಳಸಿ ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಈ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವಂತೆ ಅವರು ಸಲಹೆ ನೀಡಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy